ADVERTISEMENT

ಭಾರತ ಸಂಜಾತೆ ತೇಜಲ್‌ ಅಮೆರಿಕದ ಆಯರ್‌ ಜಿಲ್ಲಾ ನ್ಯಾಯಾಲಯದ ಮೊದಲ ನ್ಯಾಯಾಧೀಶೆ

ಪಿಟಿಐ
Published 6 ಮಾರ್ಚ್ 2023, 13:43 IST
Last Updated 6 ಮಾರ್ಚ್ 2023, 13:43 IST
   

ವಾಷಿಂಗ್ಟನ್‌: ಭಾರತ ಸಂಜಾತೆ ತೇಜಲ್‌ ಮೆಹ್ತಾ ಅವರು ಮೆಸಾಚುಸೆಟ್ಸ್‌ನ ಆಯರ್‌ ಜಿಲ್ಲಾ ನ್ಯಾಯಾಲಯದ ಮೊದಲ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಸ್ಟೇಸಿ ಫೋರ್ಟ್ಸ್‌ ಅವರು ಮಾರ್ಚ್‌ 2ರಂದು ತೇಜಲ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ತೇಜಲ್‌ ಅವರ ನಾಯಕತ್ವದಲ್ಲಿ ವಿಶ್ವಾಸವಿದೆ’ ಎಂದು ಸ್ಟೇಸಿ ಫೋರ್ಟ್ಸ್‌ ತಿಳಿಸಿದ್ದಾರೆ.

ADVERTISEMENT

ಜನರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳುವ ಭರವಸೆಯನ್ನು ತೇಜಲ್‌ ಅವರು ಇದೇ ಸಂದರ್ಭದಲ್ಲಿ ನೀಡಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತೇಜಲ್‌ ಅವರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.