ADVERTISEMENT

ಕಡಲ್ಗಳ್ಳರು ಅಪಹರಿಸಿದ್ದ ಇರಾನ್‌ ಹಡಗಿನಲ್ಲಿದ್ದ 17 ಮಂದಿಯ ರಕ್ಷಣೆ

ಪಿಟಿಐ
Published 29 ಜನವರಿ 2024, 16:03 IST
Last Updated 29 ಜನವರಿ 2024, 16:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಇರಾನ್‌ ಧ್ವಜ ಹೊಂದಿದ್ದ ‘ಇಮಾನ್‌’ ಮೀನುಗಾರಿಕಾ ಹಡಗಿನಲ್ಲಿದ್ದ 17 ಮಂದಿಯನ್ನು ರಕ್ಷಣೆ ಮಾಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕಡಲ್ಗಳ್ಳರು ಹಡಗನ್ನು ಅಪಹರಿಸಿರುವ ಮಾಹಿತಿ ಅರಿತು ‘ಐಎನ್‌ಎಸ್‌ ಸುಮಿತ್ರಾ’ ನೌಕೆಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು ಎಂದು ‌ನೌಕಾ ಪಡೆ ವಕ್ತಾರ ಕಮಾಂಡರ್‌ ವಿವೇಕ್‌ ಮಧ್ವಾಲ್‌ ಹೇಳಿದ್ದಾರೆ.

ADVERTISEMENT

ಮೀನುಗಾರಿಕಾ ಹಡಗಿನ ಒಳಗೆ ಪ್ರವೇಶಿಸಿದ್ದ ಕಡಲ್ಗಳ್ಳರು, ಅದರ ಸಿಬ್ಬಂದಿಯನ್ನು ಒತ್ತೆಸೆರೆಯಲ್ಲಿಟ್ಟಿದ್ದರು ಎಂದಿ‌ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.