ADVERTISEMENT

ವಿಕಾಸ್ ದುಬೆ ಎನ್‌‍ಕೌಂಟರ್ ಚಿತ್ರಕ್ಕಾಗಿ ಗೂಗಲಿಸಿದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 10:11 IST
Last Updated 10 ಜುಲೈ 2020, 10:11 IST
ವಿಕಾಸ್ ದುಬೆ ಎನ್‍ಕೌಂಟರ್ ನಡೆದ ಸ್ಥಳ (ಕೃಪೆ: ಎಎಫ್‌ಪಿ)
ವಿಕಾಸ್ ದುಬೆ ಎನ್‍ಕೌಂಟರ್ ನಡೆದ ಸ್ಥಳ (ಕೃಪೆ: ಎಎಫ್‌ಪಿ)   
""
""
""

ಬೆಂಗಳೂರು: ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆ ಎನ್‌‍ಕೌಂಟರ್‌ ನಡೆದಿರುವುದು ಸುದ್ದಿಯಾಗುತ್ತಿದ್ದಂತೆ ನೆಟ್ಟಿಗರು ದುಬೆ ಎನ್‍ಕೌಂಟರ್ ಚಿತ್ರಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡಿದ್ದಾರೆ.

ಗೂಗಲ್ ಟ್ರೆಂಡ್ಸ್ ಮಾಹಿತಿ ಗಮನಿಸಿದರೆ ವಿಕಾಲ್ ದುಬೆ ಎನ್‍ಕೌಂಟರ್ ಚಿತ್ರ ಮಾತ್ರ ಅಲ್ಲ ವಿಡಿಯೊ, ಮೃತದೇಹ, ಆತನ ವಯಸ್ಸು, ಪತ್ನಿ ಯಾರು ಎಂಬುದರ ಬಗ್ಗೆಯೂ ಜನರು ಜಾಲಾಡಿದ್ದಾರೆ.

ಕೆಲವು ವಾರಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗ ಆತನ ಮೃತದೇಹದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು, ಯಾವುದೇ ದುರ್ಘಟನೆ ಅಥವಾ ಹಿಂಸಾತ್ಮಕ ಕೃತ್ಯಗಳು ನಡೆದರೆ ಜನರು ಅದಕ್ಕೆ ಸಂಬಂಧಿಸಿದ ಫೋಟೊ/ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ.

ADVERTISEMENT

ಕಳೆದ ವರ್ಷ ತೆಲಂಗಾಣದಲ್ಲಿ 26ರ ಹರೆಯದ ಪಶುವೈದ್ಯೆಯ ಅತ್ಯಾಚಾರ ನಡೆದಾಗ ಜನರು ಗೂಗಲ್‍ನಲ್ಲಿ ಅತ್ಯಾಚಾರದ ವಿಡಿಯೊ ಹುಡುಕಿದ್ದರು, ಹೈದರಾಬಾದ್ ರೇಪ್ ವಿಡಿಯೊ, ಹೈದರಾಬಾದ್ ಗ್ಯಾಂಗ್ ರೇಪ್ ವಿಡಿಯೊ ಎಂಬ ಕೀವರ್ಡ್ ಬಳಸಿ ಜನರು ವಿಡಿಯೊಗಾಗಿ ಹುಡುಕಾಟ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.