ನವದೆಹಲಿ (ರಾಯಿಟರ್ಸ್): ದೇಶದಾದ್ಯಂತ ಆಗಸ್ಟ್–ಡಿಸೆಂಬರ್ ಅವಧಿಯಲ್ಲಿ ಕೋವಿಡ್–19ಗೆ ಸಾರ್ವಜನಿಕರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಹೊಂದಿರುವ ಗುರಿ ಈಡೇರುವ ಸಾಧಿಸುವ ಸಾಧ್ಯತೆ ಕಡಿಮೆ ಇದೆ. ಲಸಿಕೆ ಉತ್ಪಾದನೆಯಲ್ಲಿ ಕೊರತೆಯಾಗಲಿದೆ ಎಂದು ಆಂತರಿಕ ಮೂಲಗಳು ಹೇಳಿವೆ.
ಚಳಿಗಾಲದಲ್ಲಿ ದೇಶವು ಕೊರೊನಾ ವೈರಸ್‌ನ ಮತ್ತೊಂದು ಅಲೆಯ ಉಲ್ಬಣವನ್ನು ಎದುರಿಸಲಿದೆ ಎಂಬ ಆತಂಕದ ನಡುವೆ, ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಉತ್ಪಾದನೆಯಾಗದ ಕಾರಣ ಈ ವರ್ಷ ಎಲ್ಲ ವಯಸ್ಸಿನವರಿಗೆ ಲಸಿಕೆ ಹಾಕುವ ಯೋಜನೆಯನ್ನು ವಿಳಂಬಗೊಳಿಸಲಿದೆ ಎನ್ನಲಾಗಿದೆ.
ಅಸ್ಟ್ರಾಜೆನಿಕಾ, ಸ್ಪುಟ್ನಿಕ್– ವಿ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಆಗಸ್ಟ್ – ಡಿಸೆಂಬರ್ ಅವಧಿಯಲ್ಲಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ದೊರೆಯಲಿವೆ ಎಂದು ಸರ್ಕಾರ ಕಳೆದ ವಾರ ಅಂದಾಜು ಮಾಡಿತ್ತು. ಆದರೆ, ಅನುಮೋದಿತ ಮೂರು ಲಸಿಕೆಯ ಉತ್ಪಾದನೆಯು ನಿರೀಕ್ಷಿತ ಮಟ್ಟ ತಲುಪುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಶೇ 27ರಷ್ಟು ಕೊರತೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಕುರಿತು ಕೇಂದ್ರದ ಆರೋಗ್ಯ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.