ADVERTISEMENT

ರಾಜಸ್ಥಾನದ ಫತೇಪುರ್‌ನಲ್ಲಿ ಮೈನಸ್ 2.2 ಡಿಗ್ರಿ ಸೆಲ್ಸಿಯಸ್‌ ದಾಖಲು

ಪಿಟಿಐ
Published 18 ಜನವರಿ 2023, 7:26 IST
Last Updated 18 ಜನವರಿ 2023, 7:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ರಾಜಸ್ಥಾನದಲ್ಲಿ ತೀವ್ರ ಚಳಿಗಾಳಿ ಬೀಸುತ್ತಿದೆ. ಬುಧವಾರ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಜನರು ತತ್ತರಿಸಿದ್ದಾರೆ

ಸಿಕರ್‌ನಲ್ಲಿ ಮೈನಸ್‌ 1.5 ಡಿಗ್ರಿ ಸೆಲ್ಸಿಯಸ್, ಚುರುವಿನಲ್ಲಿ ಮೈನಸ್‌1.2 ಮತ್ತು ಕರೌಲಿನಲ್ಲಿ ಮೈನಸ್ 0.8ರಷ್ಟು ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ರಾತ್ರಿ ವೇಳೆ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಫತೇಪುರ್‌ನಲ್ಲಿ ಮೈನಸ್ 2.2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಉಳಿದಂತಹ ಪ್ರದೇಶಗಳಾದ ನರಿಯಾ 0.3 ಡಿಗ್ರಿ ಸೆಲ್ಸಿಯಸ್‌, ಚಿತ್ತೋರ್‌ಗಢ 0.1, ಅಲ್ವಾರ್ 0.5,ಬರನ್ 2 ನಲ್ಲಿ ಶ್ರೀಗಂಗಾನಗರದಲ್ಲಿ 3.1 ಮತ್ತು ಡುಂಗ್‌ಪುರದಲ್ಲಿ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ADVERTISEMENT

ಗುರುವಾರದಿಂದ ಹೀಗಿರುವ ಶೀತಗಾಳಿ ಸುಧಾರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.