ADVERTISEMENT

ಐಎನ್‌ಎಸ್‌ ಮೀಡಿಯಾ ಪ್ರಕರಣ: ಜಾರಿ ನಿರ್ದೇಶನಾಲಯಕ್ಕೆ ನೋಟಿಸ್

ಪಿಟಿಐ
Published 24 ಜುಲೈ 2021, 11:34 IST
Last Updated 24 ಜುಲೈ 2021, 11:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಐಎನ್‌ಎಸ್‌ ಮೀಡಿಯಾ ಹಣಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅರ್ಜಿ ಆಧರಿಸಿ ದೆಹಲಿ ಕೋರ್ಟ್‌ ಶನಿವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೋಟಿಸ್‌ ನೀಡಿದೆ.

ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್‌ ಅವರು, ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದರು. ಚಿದಂಬರಂ ಪರವಾಗಿ ವಕೀಲ ಅರ್ಶ್‌ದೀಪ್ ಸಿಂಗ್ ಖುರಾನಾ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿ, ಪೂರಕ ದಾಖಲೆಗಳನ್ನು ಹಾಜರುಪಡಿಸಲು ಇ.ಡಿಗೆ ಸೂಚಿಸಬೇಕು ಎಂದೂ ಅವರು ಕೋರಿದ್ದರು.

ದಾಖಲೆಗಳ ಪುಟಸಂಖ್ಯೆಗಳ ಗೊಂದಲ ಬಗೆಹರಿಸಬೇಕು, ನಾಪತ್ತೆಯಾಗಿರುವ ದಾಖಲೆಗಳನ್ನು ಹಾಜರುಪಡಿಸಬೇಕು ಎಂದೂ ಇ.ಡಿಗೆ ಸೂಚಿಸಲಾಗಿದೆ. ಈ ಪ್ರಕರಣದ ಸಂಬಂಧ ಚಿದಂಬರಂ ಅವರನ್ನು ಆಗಸ್ಟ್‌ 21, 2009ರಂದು ಸಿಬಿಐ ಬಂಧಿಸಿದ್ದು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಅದೇ ವರ್ಷ ಅಕ್ಟೋಬರ್ 16ರಂದು ಇ.ಡಿ ಬಂಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.