ADVERTISEMENT

ಜನರು ಸಾಯಬೇಕೆಂದು ಕೇಂದ್ರವು ಬಯಸಿದಂತೆ ತೋರುತ್ತದೆ: ದೆಹಲಿ ಹೈಕೋರ್ಟ್

ಪಿಟಿಐ
Published 28 ಏಪ್ರಿಲ್ 2021, 16:22 IST
Last Updated 28 ಏಪ್ರಿಲ್ 2021, 16:22 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ -19 ಚಿಕಿತ್ಸೆಗಾಗಿ ಬಳಸುವ ರೆಮ್‌ಡೆಸಿವಿರ್ ಔಷಧಿಯನ್ನು ಆಕ್ಸಿಜನ್ ಸಪೋರ್ಟ್ ಇರುವವರಿಗೆ ಮಾತ್ರ ನೀಡಬೇಕು ಎಂಬ ಹೊಸ ಪ್ರೋಟೊಕಾಲ್ ನೋಡಿದರೆ ಜನರು ಸಾಯಬೇಕೆಂದು ಕೇಂದ್ರ ಸರ್ಕಾರವು ಬಯಸಿದಂತೆ ತೋರುತ್ತದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.

‘ಇದು ತಪ್ಪು. ಇದು ಬುದ್ಧಿ ಬಳಸದೇ ಮಾಡಿರುವ ನಿರ್ಧಾರ. ಈಗ ಆಮ್ಲಜನಕವಿಲ್ಲದ ಸಪೋರ್ಟ್ ಇಲ್ಲದ ಕೋವಿಡ್ ರೋಗಿಗಳಿಗೆ ರೆಮ್‌ಡಿಸಿವಿರ್ ಸಿಗುವುದಿಲ್ಲ. ಇದು ನೀವು ಜನರು ಸಾಯಬೇಕೆಂದು ಬಯಸುತ್ತಿದ್ದೀರಿ ಎಂಬಂತೆ ತೋರುತ್ತಿದೆ’ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಔಷಧದ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರವು ಪ್ರೋಟೊಕಾಲ್ ಅನ್ನು ಬದಲಾಯಿಸುತ್ತಿದೆ ಎಂದು ಹೈಕೋರ್ಟ್ ಹೇಳಿದೆ.

ADVERTISEMENT

‘ಇದು ಸಂಪೂರ್ಣ ಅಸಮರ್ಪಕ ನಿರ್ವಹಣೆ’ ಎಂದು ನ್ಯಾಯಾಲಯ ಅಸಮಾಧಾನ ಹೊರಹಾಕಿದೆ.

ಅಗತ್ಯವಿದ್ದ 6 ಡೋಸ್‌ ರೆಮ್‌ಡಿಸಿವಿರ್ ಔಷಧದ ಬದಲು ಕೇವಲ 3 ಡೋಸ್ ಪಡೆದ ಕೋವಿಡ್–19 ಸೋಂಕಿತ ವಕೀಲರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ರೋಗಿಯು ಮಂಗಳವಾರ ರಾತ್ರಿ ಉಳಿದ ಮೂರು ಡೋಸ್ ಔಷಧಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.