ADVERTISEMENT

ಶ್ರೀಲಂಕಾದ ಹಣಕಾಸು ಸಚಿವರ ಜೊತೆ ಜೈಶಂಕರ್‌ ಮಾತುಕತೆ

ಪಿಟಿಐ
Published 15 ಜನವರಿ 2022, 15:29 IST
Last Updated 15 ಜನವರಿ 2022, 15:29 IST
ಎಸ್. ಜೈಶಂಕರ್
ಎಸ್. ಜೈಶಂಕರ್   

ನವದೆಹಲಿ: ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶ್ರೀಲಂಕಾದ ಹಣಕಾಸು ಸಚಿವ ಬಾಸಿಲ್‌ ರಾಜಪಕ್ಸೆ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ್ದು, ದ್ವೀಪ ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಯೋಜನೆಗಳು ಮತ್ತು ಹೂಡಿಕೆಗಳ ಬಗ್ಗೆ ಚರ್ಚೆ ನಡೆಸಿದರು.

ವರ್ಚುವಲ್‌ ಆಗಿ ನಡೆದ ಮಾತುಕತೆಯಲ್ಲಿ ಜೈಶಂಕರ್‌ ಅವರು, ಶ್ರೀಲಂಕಾದಲ್ಲಿ ಬಂಧನದಲ್ಲಿರುವ ಭಾರತದ ಮೀನುಗಾರರ ಕುರಿತು ಉಲ್ಲೇಖಿಸಿದರು. ಮಾನವೀಯತೆಯ ನೆಲೆಯಲ್ಲಿ ಅವರನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

‘ಭಾರತವು ಶ್ರೀಲಂಕಾದ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಲಿದೆ’ ಎಂದು ಮಾತುಕತೆಯ ಬಳಿಕ ಸಚಿವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.