
ಕೋಯಿಕ್ಕೋಡ್ (ಕೇರಳ):‘ಜಮಾತ್–ಇ–ಇಸ್ಲಾಮಿ’ ನಾಯಕರ ಮನವಿಯಂತೆ ನಾನು ಈ ಹಿಂದೆ ಅವರ ಜತೆ ಮಾತುಕತೆ ನಡೆಸಿದ್ದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೋಯಿಕ್ಕೋಡ್‌ನಲ್ಲಿ ಭಾನುವಾರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು,‘ಜಮಾತೆ ನಾಯಕರ ಜೊತೆಗೆ ಸಿಪಿಎಂ ರಾಜ್ಯ ಸಮಿತಿಯ ಕಚೇರಿಯಲ್ಲಿ ಸಭೆ ನಡೆಸಿದ್ದೆ. ಆದರೆ, ಆ ಸಭೆಯ ಕುರಿತಂತೆ ನಾನು ಯಾವುದೇ ಪ್ರಮಾಣಪತ್ರ ನೀಡಲು ಸಿದ್ಧನಿಲ್ಲ’ ಎಂದು ತಿಳಿಸಿದ್ದಾರೆ.
‘ಜಮಾತೆ ನಾಯಕರು ಇಡೀ ಸಭೆಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಯುವ ಚಳವಳಿಯ ನಾಯಕರು ಹಾಜರಿದ್ದರು. ನೀವು ಸಮಾಜ ವಿರೋಧಿ ನಾಯಕರು ಎಂದು ಅವರಿಗೆ ನೇರವಾಗಿ ಹೇಳಿದ್ದೆ. ಇದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು’ ಎಂದು ಹೇಳಿದ್ದಾರೆ.
‘ರಾಜ್ಯದ ವಿಚಾರದಲ್ಲಿ ಯಾವುದೇ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಜಮಾತೆ ಮುಖಂಡರು ವಿರೋಧಿಸುತ್ತಾರೆ. ನಾವು ಸತ್ಯ ಹೇಳಲು ಯಾವಾಗಲೂ ಹಿಂಜರಿಯಬಾರದು, ಈಗ ಅಥವಾ ಮುಂದೆಯೂ ಇರಬಹುದು’ ಎಂದು ತಿಳಿಸಿದ್ದಾರೆ.
ಜಮಾತ್–ಇ–ಇಸ್ಲಾಮಿ ಸಂಘಟನೆಯು ಮುಸ್ಲಿಂ ಸಂಘಟನೆಯಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜೊತೆಗೆ ಉತ್ತಮ ಒಡನಾಟ ಹೊಂದಿದೆ. ಜಮಾತೆ ಸಂಘಟನೆಯು ಕೋಮುವಾದಿ ಸಂಘಟನೆಯಾಗಿದೆ ಎಂದು ಪಿಣರಾಯಿ ನಿರಂತರ ಟೀಕಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.