ADVERTISEMENT

ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ್ದ ಉಗ್ರನ ಮನೆ, ಆಸ್ತಿ ಮುಟ್ಟುಗೋಲು

ಐಎಎನ್ಎಸ್
Published 17 ಆಗಸ್ಟ್ 2022, 7:11 IST
Last Updated 17 ಆಗಸ್ಟ್ 2022, 7:11 IST
ಮೃತ ಸುನಿಲ್ ಕುಮಾರ್ ಸಂಬಂಧಿಕರನ್ನು ಸಂತೈಸಿದ ಸ್ಥಳೀಯರು– ಎಎಫ್‌ಪಿ ಚಿತ್ರ
ಮೃತ ಸುನಿಲ್ ಕುಮಾರ್ ಸಂಬಂಧಿಕರನ್ನು ಸಂತೈಸಿದ ಸ್ಥಳೀಯರು– ಎಎಫ್‌ಪಿ ಚಿತ್ರ   

ಶ್ರೀನಗರ:ಶೋಪಿಯಾನ್‌ನಲ್ಲಿ ಮಂಗಳವಾರ ಸ್ಥಳೀಯ ಕಾಶ್ಮೀರಿ ಪಂಡಿತನನ್ನು ಕೊಂದ ಭಯೋತ್ಪಾದಕನ ಮನೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಶೋಪಿಯಾನ್ ಜಿಲ್ಲೆಯ ಚೋಟಿಪುರಾ ಗ್ರಾಮದಲ್ಲಿ ಕಾಶ್ಮೀರಿ ಪಂಡಿತರ ಕುಟುಂಬದ ಅರ್ಜುನ್ ನಾಥ್ ಅವರ ಪುತ್ರ ಸುನೀಲ್ ಕುಮಾರ್ ಮತ್ತು ಆತನ ಸಹೋದರ ಪಿತಾಂಬರ್ ಅಲಿಯಾಸ್ ಪಿಂಟೋ ಕುಮಾರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಪ್ರತ್ಯೇಕವಾದಿ ಉಗ್ರ ಆದಿಲ್ ಅಹ್ಮದ್ ವಾನಿಯೇ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನ ಮನೆಯನ್ನು ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಕಾಶ್ಮೀರ ನಾಯಕರಾದ ಅಲ್ತಾಫ್ ಬುಖಾರಿ, ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲವೊನ್, ಗುಲಾಮ್ ಹಸನ್ ಮಿರ್ ಸೇರಿದಂತೆ ಅನೇಕರು ಕಾಶ್ಮೀರಿ ಪಂಡಿತರ ಹತ್ಯೆಯನ್ನು ಖಂಡಿಸಿದ್ದಾರೆ.

ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಸಂಜೆಚೋಟಿಪುರಾ ಗ್ರಾಮದ ಸ್ಥಳೀಯರು ಸುನೀಲ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಉಗ್ರನ ದಾಳಿಯಲ್ಲಿ ಪಿಂಟೋ ಕುಮಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.