ADVERTISEMENT

ಕಾಶ್ಮೀರ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಶಿಕಾರ ರೇಸ್‌

ಪಿಟಿಐ
Published 11 ಜೂನ್ 2025, 15:28 IST
Last Updated 11 ಜೂನ್ 2025, 15:28 IST
ದಾಲ್‌ ಸರೋವರದಲ್ಲಿ ಬುಧವಾರ ನಡೆದ ಶಿಕಾರ ರೇಸ್‌ನಲ್ಲಿ ಪಾಲ್ಗೊಂಡಿದ್ದ ನಾವಿಕರು‌
ದಾಲ್‌ ಸರೋವರದಲ್ಲಿ ಬುಧವಾರ ನಡೆದ ಶಿಕಾರ ರೇಸ್‌ನಲ್ಲಿ ಪಾಲ್ಗೊಂಡಿದ್ದ ನಾವಿಕರು‌   

ಶ್ರೀನಗರ: ಪಹಲ್ಗಾಮ್‌ ದಾಳಿ ಬಳಿಕ ಕುಸಿತಗೊಂಡಿರುವ ಜಮ್ಮು–ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಭಾಗವಾಗಿ ಬುಧವಾರ ಸುಪ್ರಸಿದ್ಧ ದಾಲ್‌ ಸರೋವರದಲ್ಲಿ ಶಿಕಾರ ರೇಸ್‌ ಆಯೋಜಿಸಲಾಗಿತ್ತು. 

ಚಂಡೀಗಢ ಮೂಲದ ಖಾಸಗಿ ಕಾಲೇಜುಗಳ ಕೆಲವು ಗುಂಪುಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದವು‌. ಜಮ್ಮು–ಕಾಶ್ಮೀರ ಶಿಕ್ಷಣ ಸಚಿವೆ ಸಕೀನಾ ಇಟೂ ಅವರು ರೇಸ್‌ಗೆ ಚಾಲನೆ ನೀಡಿದರು‌.

ಕಾರ್ಯಕ್ರಮ ಆಯೋಜಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಸಿಬ್ಬಂದಿಯನ್ನು ಶ್ಲಾಘಿಸಿದ ಸಕೀನಾ,‘ ಇದು ಬರೀ ರೇಸ್‌ ಅಲ್ಲ. ಶಾಂತಿ, ಏಕತೆ ಹಾಗೂ ಜಮ್ಮು–ಕಾಶ್ಮೀರದ ಅವರ್ಣೀಯ ಚೆಲುವಿನ ಸಂಭ್ರಮ’ ಎಂದು ಬಣ್ಣಿಸಿದರು.

ADVERTISEMENT

ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದು ಪ್ರವಾಸಿಗರಲ್ಲಿ ಭೀತಿ ಹುಟ್ಟಿಸಿದ್ದು, ಪರಿಣಾಮ ಕಣಿವೆ ರಾಜ್ಯದ ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿತ್ತು. ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸ‌‌‌‌‌ರ್ಕಾರ ವಿವಿಧ ಕ್ರಮ ಕೈಗೊಂಡಿರುವಂತೆಯೇ ಶಿಕಾರ ರೇಸ್‌ ಆಯೋಜನೆಗೊಂಡಿರುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.