ADVERTISEMENT

ಜೆಇಇ: 24 ವಿದ್ಯಾರ್ಥಿಗಳಿಗೆ ಶೇ 100 ಅಂಕ

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಪಿಟಿಐ
Published 29 ಏಪ್ರಿಲ್ 2019, 19:11 IST
Last Updated 29 ಏಪ್ರಿಲ್ 2019, 19:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕೆ ನಡೆದ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (ಜೆಇಇ) ಫಲಿತಾಂಶವನ್ನು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ ಸೋಮವಾರ ಪ್ರಕಟಿಸಿದೆ. ಇದರಲ್ಲಿ 24 ವಿದ್ಯಾರ್ಥಿಗಳು ಶೇ 100 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಅತಿ ಹೆಚ್ಚು ಅಂಕ ಪಡೆದವರಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿ ರಾಜಸ್ಥಾನ ಮತ್ತು ತೆಲಂಗಾಣದ ತಲಾ ಇಬ್ಬರು ಇದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಮೂವರು ಇನ್ನುಳಿದಸ್ಥಾನದಲ್ಲಿದ್ದಾರೆ. ದೆಹಲಿ, ಕರ್ನಾಟಕ, ಹರಿಯಾಣ ಮತ್ತು ಪಂಜಾಬ್‌ನ ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ.

ಇದೇ ಮೊದಲ ಬಾರಿಗೆ ಜೆಇಇ ಮುಖ್ಯ ಪರೀಕ್ಷೆಯನ್ನು ಈ ವರ್ಷದ ಜನವರಿ ಮತ್ತು ಏಪ್ರಿಲ್‌ನಲ್ಲಿ ಆನ್‌ಲೈನ್‌ನಲ್ಲಿ ನಡೆಸಲಾಗಿತ್ತು.

ADVERTISEMENT

‘ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ ಎರಡೂ ಪರೀಕ್ಷೆಗಳನ್ನು ಬರೆದಿದ್ದರೆ ಯಾವುದರಲ್ಲಿ ಅತಿ ಹೆಚ್ಚು ಅಂಕ ಪಡೆದಿರುತ್ತಾರೊ ಅದನ್ನೇ ಪರಿಗಣಿಸಲಾಗುತ್ತದೆ. ಒಟ್ಟು 6.8 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 2.97 ಲಕ್ಷ ಮಂದಿ ತಮ್ಮ ಸಾಮರ್ಥ್ಯ ಉತ್ತಮಪಡಿಸಿಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರ‍್ಯಾಂಕ್‌ ಅನ್ನೂ ಸಹ ಅತಿ ಹೆಚ್ಚು ಅಂಕ ಪಡೆದ ಪರೀಕ್ಷೆಯನ್ನೇ ಗಮನದಲ್ಲಿಟ್ಟುಕೊಂಡು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.