ADVERTISEMENT

ಜಾರ್ಖಂಡ್‌ | ₹2 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಜಾರಿ: ಗಡ್ಕರಿ

ಜಾರ್ಖಂಡ್‌ಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧ

ಪಿಟಿಐ
Published 3 ಜುಲೈ 2025, 14:18 IST
Last Updated 3 ಜುಲೈ 2025, 14:18 IST
<div class="paragraphs"><p>ನಿತಿನ್‌ ಗಡ್ಕರಿ</p></div>

ನಿತಿನ್‌ ಗಡ್ಕರಿ

   

–ಪಿಟಿಐ ಚಿತ್ರ

ಗರ್ಹ್ವಾ, ಜಾರ್ಖಂಡ್‌: ‘ಜಾರ್ಖಂಡ್‌ಗೆ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ರಾಜ್ಯದಲ್ಲಿ ₹2 ಲಕ್ಷ ಕೋಟಿ ಮೊತ್ತದ ವಿವಿಧ ಯೋಜನೆಗಳು ಜಾರಿ ಹಂತದಲ್ಲಿವೆ’ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ADVERTISEMENT

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಛತ್ತೀಸ್‌ಗಢ– ಜಾರ್ಖಂಡ್‌ ನಡುವೆ 1,330 ಕೋಟಿ ವೆಚ್ಚದ ನಾಲ್ಕು ಪಥದ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ರಾಜ್ಯವು ದೊಡ್ಡ ಪ್ರಮಾಣದಲ್ಲಿ ಖನಿಜ ಸಂಪನ್ಮೂಲಗಳನ್ನು ಹೊಂದಿದ್ದು, ಹೆದ್ದಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸಲಿದೆ’ ಎಂದು ತಿಳಿಸಿದರು.

‘ನಾವು ಈಗಾಗಲೇ ₹40 ಸಾವಿರ ಕೋಟಿ ವೆಚ್ಚದ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ₹70 ಸಾವಿರ ಕೋಟಿ ವೆಚ್ಚದ ಯೋಜನೆಗಳು ಜಾರಿ ಹಂತದಲ್ಲಿವೆ. ₹75 ಸಾವಿರ ಕೋಟಿ ವೆಚ್ಚದ ಯೋಜನೆಗಳು ಅನುಮೋದನೆ ಹಂತದಲ್ಲಿವೆ’ ಎಂದು ಮಾಹಿತಿ ನೀಡಿದರು.

‘₹36 ಸಾವಿರ ಕೋಟಿ ವೆಚ್ಚದಲ್ಲಿ ವಾರಾಣಸಿ–ರಾಂಚಿ–ಕೋಲ್ಕತ್ತ ಗ್ರೀನ್‌ ಕಾರಿಡಾರ್‌ 2028ರ ಮಾರ್ಚ್‌ ಒಳಗಾಗಿ ನಿರ್ಮಾಣವಾಗಲಿದ್ದು, ರಾಂಚಿ– ವಾರಾಣಸಿ ಮಾರ್ಗವು 2028ರ ಜನವರಿ ಒಳಗಾಗಿ ನಿರ್ಮಾಣವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.