ADVERTISEMENT

ಕೋರ್ಟ್‌ ಎದುರು ಹಾಜರಾದ ಯಾಸಿನ್‌ ಮಲಿಕ್‌

ರುಬಿಯಾ ಸಯೀದ್‌ ಅಪಹರಣ ಪ್ರಕರಣ: ಮಲಿಕ್‌ ಗುರುತಿಸಿದ ಸಾಕ್ಷಿಗಳು

ಪಿಟಿಐ
Published 24 ಫೆಬ್ರುವರಿ 2023, 13:51 IST
Last Updated 24 ಫೆಬ್ರುವರಿ 2023, 13:51 IST
ಯಾಸಿನ್‌ ಮಲಿಕ್
ಯಾಸಿನ್‌ ಮಲಿಕ್   

ಜಮ್ಮು: ಜಮ್ಮು–ಕಾಶ್ಮೀರ ಲಿಬರೇಷನ್‌ ಫ್ರಂಟ್‌ ಮುಖ್ಯಸ್ಥ ಯಾಸಿನ್‌ ಮಲಿಕ್‌ನನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಇಲ್ಲಿನ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮುಫ್ತಿ ಮಹಮ್ಮದ್‌ ಸಯೀದ್‌ ಅವರ ಪುತ್ರಿ ರುಬಿಯಾ ಸಯೀದ್‌ ಅಪಹರಣ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳು ಮಲಿಕ್‌ನನ್ನು ಗುರುತಿಸಿದವು.

‘ರುಬಿಯಾ ಅಪಹರಣದ ನಂತರ ಯಾಸಿನ್‌ ಮಲಿಕ್‌ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರೆಗೆ ಹೋಗಿದ್ದ. ಪ್ರತ್ಯಕ್ಷದರ್ಶಿಗಳು ಪ್ರಕರಣ ನಡೆದ ಸ್ಥಳ ಮತ್ತು ಸಂಬಂಧಿತ ವ್ಯಕ್ತಿಗಳನ್ನು ಗುರುತಿಸಿದ್ದಾರೆ’ ಎಂದು ಸಂತ್ರಸ್ತೆ ಪರ ವಕೀಲರು ತಿಳಿಸಿದ್ದಾರೆ.

ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ಯಾಸಿನ್‌ ಮಲಿಕ್‌ ಸದ್ಯ ದೆಹಲಿಯ ತಿಹಾರ್‌ ಜೈಲಿನಲ್ಲಿದ್ದಾನೆ. ಗೃಹ ಸಚಿವಾಲಯ ಈತನ ಚಲನವನಗಳ ಮೇಲೆ ನಿರ್ಬಂಧ ವಿಧಿಸಿರುವ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.

ADVERTISEMENT

ಐವರು ಭಯೋತ್ಪಾದಕರ ಬಿಡುಗಡೆಗಾಗಿ 1989 ಡಿಸೆಂಬರ್‌ 8ರಂದು ಯಾಸಿನ್‌ ಮಲ್ಲಿಕ್‌, ರುಬಿಯಾ ಅವರನ್ನು ಅಪಹರಿಸಿ ಐದು ದಿನಗಳ ಬಳಿಕ ಬಿಡುಗಡೆ ಮಾಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.