ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಸ್ಪರ್ಧೆ: ಅಧಿಕೃತ ಘೋಷಣೆ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ; ತವರುಸ್ಮರಿಸಿದ ಕಮಲಾ

ಪಿಟಿಐ
Published 21 ಆಗಸ್ಟ್ 2020, 8:57 IST
Last Updated 21 ಆಗಸ್ಟ್ 2020, 8:57 IST
ಕಮಲಾದೇವಿ ಹ್ಯಾರಿಸ್
ಕಮಲಾದೇವಿ ಹ್ಯಾರಿಸ್   

ವಾಷಿಂಗ್ಟನ್‌:ಭಾರತ ಮೂಲದ ಅಮೆರಿಕನ್ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದಿಂದಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಯಿತು.

ಇಲ್ಲಿ ಆನ್‌ಲೈನ್‌ ಮೂಲಕ ನಡೆದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಯಿತು. ನಂತರ ಮಾತನಾಡಿದ ಕಮಲಾ ಹ್ಯಾರಿಸ್ ಅವರು ‘ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಪ್ಪಿದ್ದೇನೆ’ ಎಂದು ಪ್ರಕಟಿಸಿದರು.

‘ದೇಶಕ್ಕಾಗಿ ಹೋರಾಟ ಮಾಡಿದ ಕಪ್ಪು ಮಹಿಳೆಯರನ್ನು ಸ್ಮರಿಸುವ ಜತೆಗೆ, ಇನ್ನು ಮುಂದೆ ನಾವು ದೇಶಕ್ಕಾಗಿ ಪರಸ್ಪರ ಬದ್ಧತೆಯಿಂದ, ವಿಶ್ವಾಸದಿಂದ ಹೋರಾಡೋಣ’ ಎಂದೂ ಹೇಳಿದರು.

ADVERTISEMENT

ಇದೇ ವೇಳೆ ತವರಿನ ನೆಲ ತಮಿಳುನಾಡನ್ನು ಬಹಳ ಹೆಮ್ಮೆಯಿಂದ ಭಾಷಣದಲ್ಲಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.