ADVERTISEMENT

ಕೇರಳದ ಕೋವಿಡ್‌–19 ಹೊಸ ಹಾಟ್‌ಸ್ಪಾಟ್ ಕಣ್ಣೂರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 7:24 IST
Last Updated 22 ಏಪ್ರಿಲ್ 2020, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಕಳೆದ ಹಲವಾರು ದಿನಗಳಿಗೆ ಹೋಲಿಸಿದರೆ ಕೇರಳದಲ್ಲಿ ಮಂಗಳವಾರ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ19 ಹೊಸಪ್ರಕರಣಗಳು ಪತ್ತೆಯಾಗಿದ್ದು, ಕಣ್ಣೂರು ಜಿಲ್ಲೆಯು ಕೋವಿಡ್‌–19 ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ.

19 ಹೊಸ ಪ್ರಕರಣಗಳೊಂದಿಗೆ ಈವರೆಗೆ 102 ಪ್ರಕರಣಗಳು ಕಾಸರಗೋಡು ಜಿಲ್ಲೆಯ ಪಕ್ಕದ ಕಣ್ಣೂರು ಜಿಲ್ಲೆಯಲ್ಲಿವರದಿಯಾಗಿದೆ. ಈ ಪೈಕಿ 54 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡಿನಲ್ಲಿ 176 ಪ್ರಕರಣಗಳು ಪತ್ತೆಯಾಗಿದ್ದು, ಈಗ 26 ಪ್ರಕರಣಗಳು ಸಕ್ರಿಯವಾಗಿವೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಣ್ಣೂರಿನಲ್ಲಿ ಲಾಕ್‌ಡೌನ್ ಮಾನದಂಡಗಳನ್ನು ಕಠಿಣಗೊಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ADVERTISEMENT

14 ದಿನಗಳ ನಂತರ ಜಿಲ್ಲೆಯ 23 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು,ಕೆಲವರಲ್ಲಷ್ಟೇರೋಗದ ಲಕ್ಷಣಗಳು ಕಂಡು ಬಂದಿವೆ.ಹೀಗಾಗಿ ಅವರ ಕುಟುಂಬ ಸದಸ್ಯರು ಕೂಡ ಸೋಂಕಿಗೆ ಒಳಗಾಗಿರುವಸಾಧ್ಯತೆಯು ಹೆಚ್ಚಿದೆ. ಜಿಲ್ಲೆಯ ಒಂದೇ ಕುಟುಂಬದ 10 ಜನರು ಸೋಂಕಿತರಾಗಿದ್ದಾರೆ ಎಂದು ಕಣ್ಣೂರಿನ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಂಗಳವಾರ ವರದಿಯಾದ 19 ಹೊಸ ಪ್ರಕರಣಗಳಲ್ಲಿ 12 ಜನರು ವಿದೇಶದಿಂದ ಆಗಮಿಸಿದ್ದರೆ, ಮೂವರು ತಮಿಳುನಾಡಿನಿಂದ ಬಂದವರಾಗಿದ್ದಾರೆ. ಹೀಗಾಗಿ ಕೇರಳ-ತಮಿಳುನಾಡು ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.