ADVERTISEMENT

ಕಾರ್ಗಿಲ್ ವಿಜಯ್ ದಿವಸ್: ಹುತಾತ್ಮ ಯೋಧರಿಗೆ ಗಣ್ಯರಿಂದ ಗೌರವ ಸಲ್ಲಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2023, 3:27 IST
Last Updated 26 ಜುಲೈ 2023, 3:27 IST
ಕಾರ್ಗಿಲ್ ವಿಜಯ್ ದಿವಸ್
ಕಾರ್ಗಿಲ್ ವಿಜಯ್ ದಿವಸ್   -

ನವದೆಹಲಿ: ಕಾರ್ಗಿಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ 24ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ. 

ಕಾರ್ಗಿಲ್ ವಿಜಯ್ ದಿವಸ್ ಭಾರತದ ವೀರರ ಕಥೆಗಳನ್ನು ಹೇಳುತ್ತದೆ. ಅವರು ಯಾವಾಗಲೂ ದೇಶದ ಜನರಿಗೆ ಸ್ಫೂರ್ತಿಯಾಗಿರುತ್ತಾರೆ. ಈ ವಿಶೇಷ ದಿನದಂದು, ನಾನು ಅವರಿಗೆ ನಮಸ್ಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈ ದಿನ ಕೋಟ್ಯಂತರ ದೇಶವಾಸಿಗಳಿಗೆ ವಿಜಯದ ದಿನವಾಗಿದೆ. ತಾಯ್ನಾಡನ್ನು ರಕ್ಷಿಸಿದ ಎಲ್ಲಾ ಶಕ್ತಿಶಾಲಿ ಯೋಧರಿಗೆ ಗೌರವ ಸಲ್ಲಿಸುವ ದಿನ ಇದು. ಭಾರತ ಮಾತೆಯ ಧೈರ್ಯಶಾಲಿ ಸೈನಿಕರು ತ್ಯಾಗದಿಂದ ಈ ವಿಜಯ ಸಿಕ್ಕಿದೆ. ದೇಶದ ಸಮಗ್ರತೆಗೆ ಹೋರಾಡಿದ ಎಲ್ಲ ಸೈನಿಕರಿಗೆ ವಂದನೆಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್‌ ಮಾಡಿದ್ದಾರೆ.

ಕಾರ್ಗಿಲ್ ವಿಕಾರ್ಗಿಲ್ ವಿಜಯ್ ದಿವಸದಂದು, ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಯೋಧರಿಗೆ ನಮನಗಳು! ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಜೊತೆ ಕಾರ್ಗಿಲ್‌ ವಿಜಯದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಭಾರತದ ಗಡಿಗಳನ್ನು ರಕ್ಷಿಸುವಾಗ ಹುತಾತ್ಮರಾದ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ಗೌರವ ನಮನಗಳು. ದೇಶವು ಯಾವಾಗಲೂ ಅವರಿಗೆ ಋಣಿಯಾಗಿರುತ್ತದೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

1999ರ ಈ ದಿನದಂದು, ಕಾರ್ಗಿಲ್ ಸಂಘರ್ಷ ಎಂದೂ ಕರೆಯಲ್ಪಡುವ ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತ್ತು. ಪಾಕಿಸ್ತಾನ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.