ADVERTISEMENT

ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ: ಹಿಜಾಬ್‌ ವಿಚಾರವಾಗಿ ಲಾಲು ಯಾದವ್ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2022, 10:45 IST
Last Updated 9 ಫೆಬ್ರುವರಿ 2022, 10:45 IST
ಲಾಲು ಪ್ರಸಾದ್‌ ಯಾದವ್‌
ಲಾಲು ಪ್ರಸಾದ್‌ ಯಾದವ್‌   

ನವದೆಹಲಿ: ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಿಳಿಸಿದ್ದಾರೆ.

ಕರ್ನಾಟಕದ ಹಿಜಾಬ್‌ ವಿವಾದದ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅವರು, ‘ಬಿಜೆಪಿಯವರು ಹಣದುಬ್ಬರ, ಬಡತನದ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಅಯೋಧ್ಯೆ ಮತ್ತು ವಾರಾಣಸಿ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಇದು ಬಿಜೆಪಿಯ ಹತಾಶೆಯ ಮೂಲಕ ತಿಳಿದುಬರುತ್ತದೆ. ಅವರು ಕೇವಲ ಗಲಭೆ ಮತ್ತು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಲಾಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘70 ವರ್ಷಗಳ ಹಿಂದೆ ನಮ್ಮ ಪೂರ್ವಜರು ಬ್ರಿಟಿಷರನ್ನು ಈ ದೇಶ ತೊರೆಯುವಂತೆ ಮಾಡಿದರು. ಆದರೆ ಈಗ ಬ್ರಿಟಿಷರು ಬಿಜೆಪಿಯ ರೂಪದಲ್ಲಿ ಮರಳಿದ್ದಾರೆ’ ಎಂದೂ ಲಾಲು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾವು ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ತಿಳಿಸಿದ್ದಾರೆ. ಫೆ. 10 ರಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.