ADVERTISEMENT

ದರ್ಶನಕ್ಕೆ ನೂಕಾಟ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 19:46 IST
Last Updated 8 ಆಗಸ್ಟ್ 2018, 19:46 IST

ಚೆನ್ನೈ (ಪಿಟಿಐ/ರಾಯಿಟರ್ಸ್‌): ಕರುಣಾನಿಧಿ ಅವರ ಮೃತದೇಹವನ್ನು ಇರಿಸಿದ್ದ ರಾಜಾಜಿ ಸಭಾಂಗಣದ ಮುಂಭಾಗದಲ್ಲಿ ಜನಸಾಗರವೇ ಸೇರಿತ್ತು. ಅಗಲಿದ ನಾಯಕನ ದರ್ಶನಕ್ಕಾಗಿ ಜನ ಹಾತೊರೆದರು. ನೂಕು ನುಗ್ಗಲು ಉಂಟಾಗಿ ಇಬ್ಬರು ಮೃತಪಟ್ಟರೆ 47 ಮಂದಿ ಗಾಯಗೊಂಡಿದ್ದಾರೆ.

ಹಲವು ಮಹಿಳೆಯರಿಗೆ ತರಚು ಗಾಯಗಳಾಗಿದೆ. ಕೆಲವರು ಪ್ರಜ್ಞೆ ತಪ್ಪಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಭಾಂಗಣದ ಮುಂಭಾಗ ಆತಂಕದ ಕ್ಷಣಗಳು ಉಂಟಾದವು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಶ್ರದ್ಧಾಂಜಲಿ ಅರ್ಪಿಸಲು ಬಂದ ಜನರು ಕಿತ್ತೆಸೆದರು. ಅಂತಿಮ ದರ್ಶನಕ್ಕೆ ವ್ಯವಸ್ಥಿತವಾಗಿ ಜನರನ್ನು ಒಳಬಿಡುವ ಪೊಲೀಸರ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಜನರು ಎಲ್ಲ ಕಡೆಗಳಿಂದಲೂ ಸಭಾಂಗಣದತ್ತ ನುಗ್ಗತೊಡಗಿದರು.

ADVERTISEMENT

ಪ್ರಮುಖ ವ್ಯಕ್ತಿಗಳು ದರ್ಶನ ಪಡೆಯುವುದಕ್ಕೆ ವ್ಯವಸ್ಥೆ ಮಾಡಿದ್ದ ಸಭಾಂಗಣದ ಹಿಂಭಾಗ ಮತ್ತು ಬದಿಯ ದಾರಿಗಳಲ್ಲಿ ಜನರು ನುಗ್ಗಿದ್ದರಿಂದ ಎಲ್ಲಡೆಯೂ ಅವ್ಯವಸ್ಥೆ ಆಯಿತು.ಶಾಂತಿ ಕಾಪಾಡುವಂತೆ ಸ್ಟಾಲಿನ್‌ ಮನವಿ ಮಾಡಿಕೊಂಡ ಬಳಿಕವೇ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂತು.

ಚೆನ್ನೈ ನಗರ ಮತ್ತು ಹೊರ ವಲಯಗಳಲ್ಲಿ ಬಂದ್‌ನಂತಹ ಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.