ADVERTISEMENT

ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ

ಪಿಟಿಐ
Published 20 ಜೂನ್ 2021, 9:18 IST
Last Updated 20 ಜೂನ್ 2021, 9:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣಗಳಲ್ಲಿ ವೈಫೈ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ.

ಪ್ರಸ್ತುತ ಬಾರಾಮುಲ್ಲಾ, ಹಮ್ರೆ, ಪಠಾಣ್‌, ಮಜೂಮ್‌, ಬಡ್ಗಾಂ, ಶ್ರೀನಗರ, ಪಂಪೋರ್, ಕಾಕಾಪೋರಾ, ಅವಂತಿಪುರ, ಪಂಜ್‌ಗಮ್, ಬಿಜ್‌ಬೆಹರಾ, ಅನಂತನಾಗ್, ಸದುರಾ, ಖಾಜಿಗುಂಡ್ ಮತ್ತು ಬನಿಹಾಲ್ ನಿಲ್ದಾಣಗಳಲ್ಲಿ ರೈಲ್‌ವೈರ್‌ ವೈಫೈ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

‘ಇಂದು ವಿಶ್ವ ವೈಫೈ ದಿನವಾಗಿದ್ದು, ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ಎಲ್ಲಾ ರೈಲು ನಿಲ್ದಾಣಗಳು ವಿಶ್ವದ ಅತಿ ದೊಡ್ಡ ಸಮಗ್ರ ಸಾರ್ವಜನಿಕ ವೈಫೈ ನೆಟ್‌ವರ್ಕ್‌ನ ಭಾಗವಾಗಿ ಮಾರ್ಪಟ್ಟಿವೆ. ಭಾರತದ 6,000ಕ್ಕೂ ಹೆಚ್ಚು ರೈಲು ನಿಲ್ದಾಣಗಳೊಂದಿಗೆ ಇವುಗಳ ಸಂಪರ್ಕ ಬೆಸೆದಂತಾಗಿವೆ, ಇದು ಜಗತ್ತಿನ ಅತಿದೊಡ್ಡ ಸಂಯೋಜಿತ ವೈಫೈ ಜಾಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ’ ಎಂದು ಘೋಷಿಸಲು ಹೆಮ್ಮೆಯಾಗುತ್ತದೆ ಎಂದು ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ.

ADVERTISEMENT

ಇದು ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿದೆ ಎಂದಿರುವ ಅವರು, ಈ ಗಮನಾರ್ಹ ಸಾಧನೆ ಮಾಡಲು ಶ್ರಮಿಸಿದ ಭಾರತೀಯ ರೈಲ್ವೆ ಮತ್ತು ‘ರೈಲ್‌ಟೆಲ್‌’ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.