ADVERTISEMENT

ರಾಹುಲ್ ಭಟ್ ಹತ್ಯೆ: ಕಾಶ್ಮೀರಿ ಪಂಡಿತರ ಮುಂದುವರಿದ ಪ್ರತಿಭಟನೆ

ಪಿಟಿಐ
Published 16 ಮೇ 2022, 12:32 IST
Last Updated 16 ಮೇ 2022, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಬುದ್ಗಾಮ್ ಜಿಲ್ಲೆಯ ಚದೂರದಲ್ಲಿರುವ ಕಚೇರಿಯೊಳಗೆಯೇ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಗುಂಡಿಟ್ಟು ಕೊಂದಿರುವುದನ್ನು ವಿರೋಧಿಸಿ ಜಮ್ಮು–ಕಾಶ್ಮೀರದ ಗಂದರ್‌ಬಾಲ್ ಮತ್ತು ಅನಂತ್‌ನಾಗ್ ಜಿಲ್ಲೆಗಳಲ್ಲಿ ಸೋಮವಾರವೂ ಕಾಶ್ಮೀರಿ ಪಂಡಿತರ ಪ್ರತಿಭಟನೆಯು ಮುಂದುವರಿಯಿತು.

ಹಲವು ಕಾಶ್ಮೀರಿ ಪಂಡಿತರು ಗಂದರ್‌ಬಾಲ್ ಜಿಲ್ಲೆಯ ತುಲ್ಮುಲ್ಲಾದಲ್ಲಿ ತಮ್ಮ ಸಮುದಾಯದ ಸದಸ್ಯನ ಹತ್ಯೆಯನ್ನು ವಿರೋಧಿಸಲು ಸಮಾವೇಶಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿಗಳನ್ನು ದಹಿಸಿದರು. ರಾಹುಲ್ ಭಟ್ ಅವರ ಹತ್ಯಾ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ.

ADVERTISEMENT

ಸೇನಾ ಕಮಾಂಡರ್ ಪ್ರತಿಕ್ರಿಯೆ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಜೀವಂತವಾಗಿರಿಸುವ ಸಲುವಾಗಿ ಉಗ್ರರು, ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸಿದ್ದಾರೆ’ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಹೇಳಿದ್ದಾರೆ.

‘ಈ ರೀತಿಯ ದಾಳಿಯ ಘಟನೆಗಳನ್ನು ವಿಶ್ಲೇಷಿಸಲಾಗುತ್ತಿದ್ದು, ಇಂಥ ಬೆದರಿಕೆಗಳನ್ನು ಶಮನಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.