ADVERTISEMENT

ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ

ಪಿಟಿಐ
Published 29 ಅಕ್ಟೋಬರ್ 2019, 19:29 IST
Last Updated 29 ಅಕ್ಟೋಬರ್ 2019, 19:29 IST

ಡೆಹ್ರಾಡೂನ್‌ : ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಿಮಾಲಯ ತಪ್ಪಲಿನಲ್ಲಿರುವ ಕೇದಾರನಾಥ ದೇವಾಲಯವನ್ನು ಮಂಗಳವಾರ ಮುಚ್ಚಲಾಗಿದೆ.

ಬೆಳಿಗ್ಗೆ 8.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚುವ ಸಂದರ್ಭ ನಡೆದ ಪೂಜೆಯಲ್ಲಿ ಸುಮಾರು 1,200 ಭಕ್ತರು ಭಾಗವಹಿಸಿದ್ದರು ಎಂದು ದೇವಾಲಯದ ಮೂಲಗಳು ಹೇಳಿವೆ. ದೇವಾಲಯದಲ್ಲಿ ಪೂಜಿಸುತ್ತಿದ್ದ ಶಿವನ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಇರಿಸಿ ಉಖೀಮಠದ ಓಂಕಾರೇಶ್ವರ ದೇವಾಲಯದತ್ತ ಭಕ್ತರು ಮೆರವಣಿಗೆಯಲ್ಲಿ ಕೊಂಡೊಯ್ದರು. ಈ ಮೆರವಣಿಗೆಯು ಇದೇ 31ರಂದು ಉಖೀಮಠ ತಲುಪಲಿದೆ.ಮುಂದಿನ ಆರು ತಿಂಗಳ ಕಾಲ ಇದೇ ದೇವಾಲಯದಲ್ಲಿ ಶಿವದೇವರ ಪೂಜೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT