ADVERTISEMENT

ಕೇರಳ: ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:25 IST
Last Updated 29 ಅಕ್ಟೋಬರ್ 2025, 16:25 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ರಾಜ್ಯದಲ್ಲಿ ‘ಪ್ರಧಾನಮಂತ್ರಿ ಸ್ಕೂಲ್‌ ಫಾರ್‌ ರೈಸಿಂಗ್‌ ಇಂಡಿಯಾ’ (ಪಿಎಂ–ಶ್ರೀ) ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರವನ್ನು ತಡೆಹಿಡಿಯಲು ಕೇರಳ ಸರ್ಕಾರ ನಿರ್ಧರಿಸಿದೆ. ಯೋಜನೆಗೆ ಸಿಪಿಐ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ.

‘ಏಳು ಮಂದಿ ಸದಸ್ಯರನ್ನು ಒಳಗೊಂಡ ಸಂಪುಟ ಉಪ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದೆ. ಸಮಿತಿಯ ವರದಿ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬುಧವಾರ ತಿಳಿಸಿದರು.
ಪಿಣರಾಯಿ ಅವರು, ‘ಯೋಜನೆಯನ್ನು ಪರಿಶೀಲನೆಗೆ ಕಳುಹಿಸಿರುವುದರಿಂದ ಈ ಕುರಿತ ಪ್ರಶ್ನೆಗಳು ಅನಗತ್ಯ’ ಎಂದು ಹೇಳುವ ಮೂಲಕ ಸುದ್ದಿಗಾರರ ಪ್ರಶ್ನೆಗಳನ್ನು ನಿರಾಕರಿಸಿದರು.

ಇದೇ ಸಂದರ್ಭದಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿಯು ಆರ್‌ಎಸ್‌ಎಸ್‌ ಸಿದ್ದಾಂತವನ್ನು ಶಿಕ್ಷಣ ಕ್ಷೇತ್ರದ ಮೇಲೆ ಹೇರುವ ಹುನ್ನಾರ ಎಂದು ಅವರು ಪುನರುಚ್ಚರಿಸಿದರು. 

ಉಪ ಸಮಿತಿ ಪರಿಶೀಲನೆ ನಂತರವೇ ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.