ADVERTISEMENT

ಅತ್ಯಾಚಾರ ಅಪರಾಧ: ಪಾದ್ರಿ ಉಚ್ಚಾಟನೆ

ಪಿಟಿಐ
Published 1 ಮಾರ್ಚ್ 2020, 19:58 IST
Last Updated 1 ಮಾರ್ಚ್ 2020, 19:58 IST

ಕೊಚ್ಚಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವಕೇರಳದ ಪಾದ್ರಿಯೊಬ್ಬರನ್ನು ಚರ್ಚ್‌ ಕರ್ತವ್ಯದಿಂದ ಉಚ್ಚಾಟಿಸಲಾಗಿದೆ.

‘ಶೂನ್ಯ ಸಹಿಷ್ಣು ನೀತಿಗೆ ಬದ್ಧರಾಗಿರುವ ಪೋಪ್ ಫ್ರಾನ್ಸಿಸ್ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ. ಪಾದ್ರಿಗೆ ವಹಿಸಲಾಗಿದ್ದ ಎಲ್ಲ ಅಧಿಕಾರಗಳನ್ನು ಹಿಂಪಡೆಯಲಾಗಿದೆ. ಅವರು ಇನ್ನು ಸಾಮಾನ್ಯ ವ್ಯಕ್ತಿಯಂತೆ ಬದುಕಬೇಕಾಗುತ್ತದೆ’ ಎಂದು ಚರ್ಚಿನ ಅಧಿಕಾರಿಗಳು ಹೇಳಿದ್ದಾರೆ.

ಸೈರೊ ಮಲಬಾರ್‌ ಚರ್ಚಿನ ಪಾದ್ರಿ ರಾಬಿನ್ ವದಕ್ಕುಂಚೇರಿ ವಿರುದ್ಧ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಪೋಕ್ಸೊನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 3ಲಕ್ಷ ದಂಡ ವಿಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.