ADVERTISEMENT

₹ 1 ಕೋಟಿ ಲಾಟರಿ ಗೆದ್ದು ತೆರಿಗೆ ವಂಚಿಸಲು ಹೋಗಿ ಅಪಹರಣಕ್ಕೊಳಗಾದ 'ಅದೃಷ್ಟವಂತ'

ಕೇರಳ: ಲಾಟರಿ ಟಿಕೆಟ್‌ನಲ್ಲಿ ಬಂದ ಅದೃಷ್ಟ ತೆರಿಗೆ ವಂಚಿಸಲು ಹೋದಾಗ ಪರರ ಪಾಲಾಯ್ತು!

ಪಿಟಿಐ
Published 16 ಜನವರಿ 2026, 8:02 IST
Last Updated 16 ಜನವರಿ 2026, 8:02 IST
<div class="paragraphs"><p>ಲಾಟರಿ ಟಿಕೆಟ್‌ಗಳು</p></div>

ಲಾಟರಿ ಟಿಕೆಟ್‌ಗಳು

   

ಐಸ್ಟಾಕ್ ಚಿತ್ರ

ಕಣ್ಣೂರು (ಕೇರಳ): ಪೆರವೂರ್‌ನಲ್ಲಿ ₹ 1 ಕೋಟಿ ಲಾಟರಿ ಬಹುಮಾನ ಗೆದ್ದ ವ್ಯಕ್ತಿಯನ್ನು ಗುಂಪೊಂದು ಅಪಹರಿಸಿ, ಟಿಕೆಟ್‌ ಕಸಿದುಕೊಂಡಿರುವ ಪ್ರಕರಣ ವರದಿಯಾಗಿದೆ.

ADVERTISEMENT

ಪೆರವೂರ್‌ನ ಸಾದಿಕ್‌ ಎ.ಕೆ. (46) ಎಂಬವರು ಡಿಸೆಂಬರ್‌ 30ರಂದು ನಡೆದ 'ಲಕ್ಕಿ ಡ್ರಾ' ವೇಳೆ ಬಹುಮಾನ ಗೆದ್ದಿದ್ದರು. ಅವರನ್ನು ಅಪಹರಿಸಿರುವ ಐವರು ಆರೋಪಿಗಳ ಗುಂಪು 'ಸ್ತ್ರೀ ಶಕ್ತಿ ಲಾಟರಿ' ಟಿಕೆಟ್‌ ಅನ್ನು ಕಸಿದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಗಳ ಗುಂಪಿನ ಒಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.

'ಬಹುಮಾನದ ಮೊತ್ತದಲ್ಲಿ ಒಂದಿಷ್ಟು ಹಣ ತೆರಿಗೆ ರೂಪದಲ್ಲಿ ತಕ್ಷಣವೇ ಕಡಿತಗೊಳ್ಳುವ ಕಾರಣ, ಅದನ್ನು ತಪ್ಪಿಸುವ ಸಲುವಾಗಿ ಸಾದಿಕ್‌ ಬ್ಲಾಕ್‌ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರಲು ಯತ್ನಿಸಿದ್ದ. ಅದಕ್ಕಾಗಿ ಸ್ನೇಹಿತನ ಮೂಲಕ ಆರೋಪಿಗಳ ಗ್ಯಾಂಗ್‌ ಅನ್ನು ಸಂಪರ್ಕಿಸಿದ್ದ. ಅವರು, ಟಿಕೆಟ್‌ ಬದಲು ಹಣ ನೀಡುವುದಾಗಿ ಒಪ್ಪಿದ್ದರು' ಎಂದು ಪೊಲೀಸರು ಹೇಳಿದ್ದಾರೆ.

'ಅದರಂತೆ, ಸಾದಿಕ್‌ ಹಾಗೂ ಅವರ ಸ್ನೇಹಿತ ಪೆರವೂರ್‌ನ ಮನಥನ ಪ್ರದೇಶಕ್ಕೆ ಬುಧವಾರ (ಜನವರಿ 14ರಂದು) ರಾತ್ರಿ 9ರ ಸುಮಾರಿಗೆ ತಲುಪಿದ್ದರು. ಆದರೆ, ಅವರಿಬ್ಬರನ್ನೂ ಕಾರಿನಲ್ಲಿ ಅಪಹರಿಸಿದ ಗುಂಪು, ಸ್ವಲ್ಪ ದೂರ ಕ್ರಮಿಸಿದ ನಂತರ ಸಾದಿಕ್‌ ಸ್ನೇಹಿತನನ್ನು ಕೆಳಗಿಳಿಸಿ ಹೊರಟಿತ್ತು. ಬಳಿಕ, ಸಾದಿಕ್‌ಗೆ ಬೆದರಿಕೆಯೊಡ್ಡಿ, ಟಿಕೆಟ್‌ ಅನ್ನು ಕಸಿದುಕೊಂಡು ಮತ್ತೊಂದು ಸ್ಥಳದಲ್ಲಿ ಇಳಿಸಿ ಪರಾರಿಯಾಗಿದೆ' ಎಂದು ವಿವರಿಸಿದ್ದಾರೆ.

ಸಾದಿಕ್‌, ಗುರುವಾರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸಾದಿಕ್‌ ಮಾಹಿತಿ ಆಧರಿಸಿ, ಸುಹೈದ್‌ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.