ADVERTISEMENT

ಅತ್ಯಾಚಾರ ಆರೋಪ: ಬಿಷಪ್‌ ಫ್ರಾಂಕೊ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:09 IST
Last Updated 9 ಏಪ್ರಿಲ್ 2019, 16:09 IST
ಬಿಷಪ್‌ ಫ್ರಾಂಕೊ
ಬಿಷಪ್‌ ಫ್ರಾಂಕೊ   

ತಿರುವನಂತಪುರ:ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ಮಾಜಿ ಬಿಷಪ್‌ ಫ್ರಾಂಕೊ ಮುಲ್ಲಕಲ್ ವಿರುದ್ಧ ಕೊಟ್ಟಾಯಂ ನ್ಯಾಯಾಲಯದಲ್ಲಿ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಫ್ರಾಂಕೊ ವಿರುದ್ಧಅತ್ಯಾಚಾರ,ಅಸ್ವಾಭಾವಿಕ ಲೈಂಗಿಕತೆ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

2014 ರಿಂದ 2016ರ ನಡುವೆ ಹಲವು ಬಾರಿ ಬಿಷಪ್‌ ಫ್ರಾಂಕೊ ಮುಲ್ಲಕಲ್‌ ಅತ್ಯಾಚಾರ ಎಸಗಿದ್ದರು ಎಂದುಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು.

ADVERTISEMENT

ಈ ಪ್ರಕರಣದಲ್ಲಿ ಸುಮಾರು 85 ಸಾಕ್ಷಿಗಳಿವೆ. ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯಲ್ಲಿ 10 ಸಾಕ್ಷಿಗಳು ಈಗಾಗಲೇ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಾರೆ.

ಕೊಚ್ಚಿಯ ಕ್ರೈಸ್ತ ಸನ್ಯಾನಿಸಿಯರು‘ಸೇವ್ ಮೈ ಸಿಸ್ಟರ್ಸ್‌’(ನಮ್ಮ ಸಹೋದರಿಯನ್ನು ರಕ್ಷಿಸಿ) ಪ್ರತಿಭಟನೆಯ ನಂತರ ಪ್ರಕರಣದ ತನಿಖೆ ಚುರುಕು ಪಡೆಯಿತು.

ಹಲವು ವಾರಗಳ ಹಿಂದೆಯೇ ಆರೋಪಪಟ್ಟಿ ತಯಾರಿಸಲಾಗಿತ್ತು. ಪೊಲೀಸ್‌ ಪ್ರಧಾನ ಕಚೇರಿಯಿಂದ ಪರಿಶೀಲನೆ ಮತ್ತು ಅನುಮತಿಯ ಅಗತ್ಯವಿದ್ದ ಕಾರಣ ಕಡತ ಬಾಕಿ ಉಳಿದಿತ್ತು. ಚಾರ್ಚ್‌ಶೀಟ್‌ ಸಲ್ಲಿಕೆ ಮತ್ತಷ್ಟು ವಿಳಂಬವಾದರೆ, ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ಕ್ರೈಸ್ತ ಸನ್ಯಾಸಿಗಳು ಬೆದರಿಕೆ ಹಾಕಿದ್ದರು. ಹಾಗಾಗಿ ಆರೋಪಪಟ್ಟಿ ಸಲ್ಲಿಕೆಯನ್ನು ತ್ವರಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.