ADVERTISEMENT

ಶ್ರೀಕೃಷ್ಣ ಜನ್ಮಭೂಮಿ ವಿವಾದ: ಸ್ಥಿತಿಗತಿಗಳ ವರದಿ ಸಲ್ಲಿಸಲು ಸೂಚನೆ

ಪಿಟಿಐ
Published 30 ಮಾರ್ಚ್ 2023, 14:32 IST
Last Updated 30 ಮಾರ್ಚ್ 2023, 14:32 IST
.
.   

ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿಗಳ ವರದಿ ಸಲ್ಲಿಸುವಂತೆ ಇಲ್ಲಿನ ನ್ಯಾಯಾಲಯವು ಉತ್ತರಪ್ರದೇಶದ ಕಂದಾಯ ಇಲಾಖೆಗೆ ಸೂಚಿಸಿದೆ.

13.37 ಎಕರೆ ವ್ಯಾಪ್ತಿಯ ವಿವಾದಿತ ಭೂಮಿಯ ಸ್ಥಿತಿಗತಿಗಳ ವರದಿ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಏಪ್ರಿಲ್‌ 17ಕ್ಕೆ ನಿಗದಿಪಡಿಸಿದೆ.

ಸ್ಥಿತಿಗತಿಗಳ ವರದಿ ಸಲ್ಲಿಸುವಂತೆ ನ್ಯಾಯಾಲಯವು ಕಳೆದ ಡಿಸೆಂಬರ್‌ 22ರಂದು ಕಂದಾಯ ಇಲಾಖೆಗೆ ನಿರ್ದೇಶನ ನೀಡಿತ್ತು. ಆದರೆ ಇದಕ್ಕೆ ಪ್ರತಿವಾದಿಯು ವಿರೋಧ ವ್ಯಕ್ತಪಡಿಸಿದ್ದ ಕಾರಣ ಆ ಆದೇಶವನ್ನು ರದ್ದುಗೊಳಿಸಲಾಗಿತ್ತು.

ADVERTISEMENT

‘ಹಿಂದೂ ಸೇನಾ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ಸುರ್ಜಿತ್‌ ಸಿಂಗ್ ಯಾದವ್‌ ಅವರು ಡಿಸೆಂಬರ್‌ 4ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಬುಧವಾರ ನಡೆಸಿದೆ’ ಎಂದು ದೂರುದಾರರ ಪರ ವಕೀಲ ಶೈಲೇಶ್‌ ದುಬೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.