ADVERTISEMENT

ಕಾಪ್ಟರ್ ದುರಂತ: ಸೇನಾ ಗೌರವದೊಂದಿಗೆ ಲ್ಯಾನ್ಸ್‌ ನಾಯಕ್ ಸಾಯಿ ತೇಜಾ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 14:34 IST
Last Updated 12 ಡಿಸೆಂಬರ್ 2021, 14:34 IST
ಹೆಲಿಕಾಪ್ಟರ್‌ ಅವಘಡದಲ್ಲಿ ಮೃತಪಟ್ಟಿದ್ದ ಲ್ಯಾನ್ಸ್ ನಾಯಕ್‌ ಸಾಯಿತೇಜಾ ಅವರ ಅಂತ್ಯಕ್ರಿಯೆ ಚಿತ್ತೂರು ಜಿಲ್ಲೆಯ ಹುಟ್ಟೂರು ರೇಗಡಪಲ್ಲೆಯಲ್ಲಿ ಭಾನುವಾರ ಸೇನಾ ಗೌರವದೊಂದಿಗೆ ನಡೆಯಿತು.
ಹೆಲಿಕಾಪ್ಟರ್‌ ಅವಘಡದಲ್ಲಿ ಮೃತಪಟ್ಟಿದ್ದ ಲ್ಯಾನ್ಸ್ ನಾಯಕ್‌ ಸಾಯಿತೇಜಾ ಅವರ ಅಂತ್ಯಕ್ರಿಯೆ ಚಿತ್ತೂರು ಜಿಲ್ಲೆಯ ಹುಟ್ಟೂರು ರೇಗಡಪಲ್ಲೆಯಲ್ಲಿ ಭಾನುವಾರ ಸೇನಾ ಗೌರವದೊಂದಿಗೆ ನಡೆಯಿತು.   

ಹೈದರಾಬಾದ್: ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದ ಲ್ಯಾನ್ಸ್‌ನಾಯಕ್ ಸಾಯಿ ತೇಜಾ ಅವರ ಅಂತ್ಯಕ್ರಿಯೆ, ಚಿತ್ತೂರು ಜಿಲ್ಲೆಯ ಅವರ ಹುಟ್ಟೂರು ರೇಗಡಪಲ್ಲಿಯ ತೋಟದಲ್ಲಿ ಸೇನಾ ಗೌರವದೊಂದಿಗೆ ನಡೆಯಿತು.ಇದಕ್ಕೂ ಮುನ್ನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಕೃಷಿಕ ಕುಟುಂಬ ಹಿನ್ನೆಲೆಯ ಸಾಯಿ ತೇಜಾ 2013ರಲ್ಲಿ ಸೇನೆಗೆ ಸೇರಿದ್ದು, ಬಳಿಕ ವಿಶೇಷ ಪಡೆಗೆ ನಿಯೋಜನೆ
ಗೊಂಡಿದ್ದರು. ಅವರ ಕಾರ್ಯದಕ್ಷತೆ ಗಮನಿಸಿ ಸಿಡಿಎಸ್‌ ಅವರ ಭದ್ರತಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ತೇಜಾ ಅವರ ತಮ್ಮ ಕೂಡ ಸೇನೆಯಲ್ಲಿದ್ದು ಸದ್ಯ ಸಿಕ್ಕಿಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತೇಜಾ ಅವರಿಗೆ ಪತ್ನಿ, 5 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ.

ADVERTISEMENT

ಮೃತ ಯೋಧನ ಪತ್ನಿಗೆ ನೌಕರಿ ನೀಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಪರಿಗಣಿಸಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯತ್ ರಾಜ್‌ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.