ADVERTISEMENT

ಭಾಷೆ, ಕ್ಷೇತ್ರ ಪುನರ್‌ವಿಂಗಡನೆಯೇ ಪ್ರಮುಖ ಸವಾಲು: ಸ್ಟಾಲಿನ್‌

ಪಿಟಿಐ
Published 28 ಫೆಬ್ರುವರಿ 2025, 15:26 IST
Last Updated 28 ಫೆಬ್ರುವರಿ 2025, 15:26 IST
   

ಚೆನ್ನೈ: ‘ಭಾಷೆಯ ಹೋರಾಟ ಮತ್ತು ಕ್ಷೇತ್ರ ಪುನರ್‌ವಿಂಗಡನೆ ನಮ್ಮ ಎದುರು ಇರುವ ಪ್ರಮುಖ ಸವಾಲುಗಳಾಗಿದ್ದು, ತಮಿಳಿಗರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಕರೆ ನೀಡಿದ್ದಾರೆ.

‘ಭಾಷೆಯು ತಮಿಳರ ಜೀವನಾಡಿಯಾಗಿದ್ದರೆ, ನ್ಯಾಯಬದ್ಧ ಕ್ಷೇತ್ರ ಪುನರ್‌ವಿಂಗಡನೆ ನಮ್ಮ ಹಕ್ಕಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ. 

ತಮ್ಮ 72ನೇ ಹುಟ್ಟಹಬ್ಬದ ಮುನ್ನಾದಿನ ಡಿಎಂಕೆ ಕಾರ್ಯಕರ್ತರಿಗೆ ವಿಡಿಯೊ ಸಂದೇಶ ಕಳುಹಿಸಿರುವ ಅವರು, ಈ ಎರಡೂ ಸವಾಲುಗಳ ವಿರುದ್ಧ ತಮಿಳುನಾಡು ಮತ್ತು ಡಿಎಂಕೆ ಬದ್ಧತೆಯಿಂದ ಹೋರಾಟ ನಡೆಸುತ್ತದೆ ಎಂದು ಹೇಳಿದ್ದಾರೆ. ಜನಸಂಖ್ಯೆಯನ್ನು ಮಾತ್ರವೇ ಆಧರಿಸಿ ಸಂಸದೀಯ ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸಬಾರದು ಎಂಬುದು ತಮಿಳುನಾಡಿನ ಬೇಡಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇತರ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಅಸಮಾನ ಹೆಚ್ಚಳ ಆಗುವುದಿಲ್ಲ ಎಂಬ ಭರವಸೆಯನ್ನು ಅದು ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿ, ಆ ಪಕ್ಷವನ್ನು ತಮಿಳುನಾಡು ವಿರೋಧಿ ಎಂದು ಬಿಂಬಿಸುವುದನ್ನು ಮುಂದುವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.