ADVERTISEMENT

ಶಸ್ತ್ರಾಸ್ತ್ರ ಸಾಗಣೆಗೆ ಡ್ರೋನ್‌ ಬಳಕೆ:ಎಲ್‌ಇಟಿ ಸದಸ್ಯನ ಬಂಧನ

ಪಿಟಿಐ
Published 12 ಅಕ್ಟೋಬರ್ 2021, 12:55 IST
Last Updated 12 ಅಕ್ಟೋಬರ್ 2021, 12:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು (ಪಿಟಿಐ): ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ, ಡ್ರೋನ್‌ ಅನ್ನು ಬಳಸಿ ಶಸ್ತ್ರಾಸ್ರಗಳನ್ನು ಸಾಗಣೆ ಮಾಡಿದ್ದ ಪ್ರಕರಣದ ಸಂಬಂಧ ಲಷ್ಕರ್ ಎ ತೊಯಬಾ (ಎಲ್‌ಇಟಿ) ಸಂಘಟನೆಯ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನನ್ನು ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ವೆರಿನಾಗ್‌ನ ನಿವಾಸಿ ಇರ್ಫಾನ್‌ ಅಹ್ಮದ್‌ ಭಟ್‌ ಎಂದು ಗುರುತಿಸಲಾಗಿದೆ. ಅಂತರರಾಷ್ಟ್ರೀಯ ಗಡಿಗೆ 6 ಕಿ.ಮೀ. ದೂರದಲ್ಲಿರುವ ಸೌಂಜನಾ ಗ್ರಾಮದ ವ್ಯಾಪ್ತಿಯಲ್ಲಿ ಅಕ್ಟೋಬರ್ 2ರಂದು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಎಡಿಜಿಪಿ ಮುಖೇಶ್‌ ಸಿಂಗ್ ತಿಳಿಸಿದರು.

ಎ.ಕೆ ಅಸಾಲ್ಟ್‌ ರೈಫಲ್, ಮೂರು ಮ್ಯಾಗಜಿನ್‌ಗಳು, 30 ಗುಂಡುಗಳು ಮತ್ತು ಒಂದು ಸೂಕ್ಷ್ಮ ದರ್ಶಕವನ್ನು ಸ್ಥಳದಿಂದ ಜಪ್ತಿ ಮಾಡಲಾಗಿತ್ತು. ಅಲ್ಲದೆ ಐಪಿಸಿ, ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ, ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

ADVERTISEMENT

ಪಾಕಿಸ್ತಾನ ಗಡಿ ಭಾಗದಿಂದ ಡ್ರೋನ್‌ ಅನ್ನು ಬಳಸಿ ನಡೆಸುತ್ತಿರುವ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿವೆ. ಈ ಬೆಳವಣಿಗೆಯು ಭದ್ರತಾ ಪಡೆಗಳಿಗೆ ತೀವ್ರ ರೀತಿಯಲ್ಲಿ ಸವಾಲು ಒಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.