ಅಂಗಡಿ ಮಾಲೀಕ ವಿಜಯ್ ಮೇವಾಲಾಲ್ ಗುಪ್ತಾ
–ಎಎನ್‌ಐ ಎಕ್ಸ್ (ಟ್ವಿಟರ್) ಚಿತ್ರ
ನಾಗ್ಪುರ: ಮಸಾಲೆಯುಕ್ತ ನೀರು, ಆಲೂಗಡ್ಡೆ, ಕಡಲೆ ಮತ್ತು ಬಟಾಣಿಯಿಂದ ತುಂಬಿದ ಗರಿಗರಿಯಾದ ಪೂರಿಗಳನ್ನು ಒಳಗೊಂಡ ‘ಪಾನಿಪೂರಿ’ ಅಥವಾ ‘ಪುಚ್ಕಾ’ ಎಂದು ಕರೆಯಲ್ಪಡುವ ಗೋಲ್‌ಗಪ್ಪಾ ಭಾರತದಲ್ಲಿ ಹೆಚ್ಚು ಜನಪ್ರಿಯ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದೆ.
ಈ ಮಸಾಲೆ ತಿಂಡಿಯನ್ನು ಎಲ್ಲಾ ವರ್ಗದ ಜನರು ಇಷ್ಟಪಡುತ್ತಾರೆ. ಹಾಗೆಯೇ ಅಂಗಡಿಗಳಲ್ಲಿ ಯಾವ ಆಫರ್‌ಗಳಿವೆ ಎಂದು ನೋಡುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ನಾಗ್ಪುರದ ಗೋಲ್‌ಗಪ್ಪಾ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ವಿಶೇಷವಾದ ಆಫರ್‌ವೊಂದನ್ನು ಘೋಷಿಸಿದ್ದಾರೆ. ಇದೀಗ ಅಂಗಡಿಯ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಗಮನ ಸೆಳೆದಿವೆ.
ನಾಗ್ಪುರ ಆರೆಂಜ್ ಸಿಟಿಯಲ್ಲಿರುವ ವಿಜಯ್ ಮೇವಾಲಾಲ್ ಗುಪ್ತಾ ಅವರು ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಪಾನಿಪೂರಿ ಪ್ರಿಯರು ಒಮ್ಮೆ ₹99,000 ಪಾವತಿಸಿ ಬದುಕಿರುವವರೆಗೆ ಅನಿಯಮಿತ ಪಾನಿಪೂರಿ ತಿನ್ನಬಹುದಾಗಿದೆ. ಜತೆಗೆ, 151 ಪಾನಿಪೂರಿಗಳನ್ನು ಒಂದೇ ಸಿಟ್ಟಿಂಗ್‌ನಲ್ಲಿ ತಿನ್ನುವವರಿಗೆ ₹21,000 ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
‘ನಾವು ₹1ರಿಂದ ₹99,000 ರವರೆಗಿನ ಆಫರ್‌ಗಳನ್ನು ನೀಡಿದ್ದೇವೆ. ಇಬ್ಬರು ಗ್ರಾಹಕರು ಈಗಾಗಲೇ ₹99 ಸಾವಿರದ ಆಫರ್ ಅನ್ನು ಪಡೆದಿದ್ದಾರೆ’ ಎಂದು ಅಂಗಡಿ ಮಾಲೀಕ ವಿಜಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.