ADVERTISEMENT

ಬಿಹಾರ: ಎನ್‌ಡಿಎಗೆ ಎಲ್‌ಜೆಪಿ (ಆರ್‌ವಿ) ಸೇರ್ಪಡೆ

ಹಾಜಿಪುರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ: ಚಿರಾಗ್‌ ಪಾಸ್ವಾನ್‌

ಪಿಟಿಐ
Published 18 ಜುಲೈ 2023, 15:55 IST
Last Updated 18 ಜುಲೈ 2023, 15:55 IST
ಚಿರಾಗ್‌ ಪಾಸ್ವಾನ್‌
ಚಿರಾಗ್‌ ಪಾಸ್ವಾನ್‌   

ನವದೆಹಲಿ: ಲೋಕ ಜನಶಕ್ತಿ ಪಕ್ಷವು (ರಾಮ್‌ ವಿಲಾಸ್‌–ಆರ್‌ವಿ) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮಂಗಳವಾರ ಸೇರ್ಪಡೆಯಾಯಿತು. 

ಪಕ್ಷದ ನಾಯಕ ಚಿರಾಗ್‌ ಪಾಸ್ವಾನ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಜೊತೆ ಸಕಾರಾತ್ಮಕ ಚರ್ಚೆ ನಡೆಸಿದ ಬಳಿಕ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಮಾಡಲಾಯಿತು ಎಂದರು. ಆದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಇತರ ನಾಯಕರ ಜೊತೆ ನಡೆಸಿದ ಮಾತುಕತೆ ಕುರಿತು ಮಾಹಿತಿ ನೀಡಲು ಅವರು ನಿರಾಕರಿಸಿದರು. 

ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಸ್ಥಾನಗಳನ್ನೂ ಎಲ್‌ಜೆಪಿ (ಆರ್‌ವಿ) ಮತ್ತು ಬಿಜೆಪಿ ಒಟ್ಟಾಗಿ ಗೆಲ್ಲಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ADVERTISEMENT

2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಈ ಎರಡು ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎನ್ನಲಾಗಿದೆ.

ಹಾಜಿಪುರದಿಂದ ಸ್ಪರ್ಧೆ: ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ತಾವು ಕಣಕ್ಕಿಳಿಯುವುದಾಗಿ ಚಿರಾಗ್‌ ಅವರು ಹೇಳಿದರು. ಸದ್ಯ ಹಾಜಿಪುರ ಕ್ಷೇತ್ರವನ್ನು ಚಿರಾಗ್‌ ಅವರ ಚಿಕ್ಕಪ್ಪ, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಪಶುಪತಿ ಕುಮಾರ್‌ ಪಾರಸ್‌ ಅವರು ಪ್ರತಿನಿಧಿಸುತ್ತಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಅವಿಭಾಜ್ಯ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಎಷ್ಟು ಸೀಟು ಬಿಟ್ಟುಕೊಟ್ಟಿತ್ತೊ ಅಷ್ಟೇ ಸೀಟುಗಳನ್ನು ಈ ಬಾರಿ ತಮ್ಮ ಪಕ್ಷಕ್ಕೆ ಬಿಟ್ಟುಕೊಡುವುದನ್ನು ನಿರೀಕ್ಷಿಸುತ್ತಿರುವುದಾಗಿ ಚಿರಾಗ್‌ ಈ ಹಿಂದೆಯೇ ಸೂಚನೆ ನೀಡಿದ್ದರು. ಕಳೆದಬಾರಿ ಎಲ್‌ಜೆಪಿ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.