ADVERTISEMENT

ಪಿ.ಸಿ. ಘೋಷ್‌ ಮೊದಲ ಲೋಕಪಾಲ

ಪಿಟಿಐ
Published 19 ಮಾರ್ಚ್ 2019, 19:51 IST
Last Updated 19 ಮಾರ್ಚ್ 2019, 19:51 IST
ನ್ಯಾ. ಘೋಷ್
ನ್ಯಾ. ಘೋಷ್   

ನವದೆಹಲಿ:ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಲೋಕಪಾಲ ಸಂಸ್ಥೆಗೆ ನ್ಯಾಯಾಂಗ ಕ್ಷೇತ್ರದ ಸದಸ್ಯರು ಮತ್ತು ನ್ಯಾಯಾಂಗೇತರ ಕ್ಷೇತ್ರದ ಸದಸ್ಯರನ್ನೂ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಈ ನೇಮಕಾತಿ ನಡೆದಿದೆ.

ನ್ಯಾಯಾಂಗ ಕ್ಷೇತ್ರದ ಸದಸ್ಯರು:ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೋಸ್ಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಷ ಕುಮಾರಿ, ಅಜಯ್ ಕುಮಾರ್ ತ್ರಿಪಾಠಿ.

ADVERTISEMENT

ನ್ಯಾಯಾಂಗೇತರ ಕ್ಷೇತ್ರದ ಸದಸ್ಯರು:ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜಿತ್ ಪ್ರಸಾದ್ ಗೌತಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.