ADVERTISEMENT

ಚುನಾವಣೆ: ವಿದ್ಯುತ್‌ ಘಟಕಗಳಲ್ಲಿ ಸಾಕಷ್ಟು ಕಲ್ಲಿದ್ದಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:37 IST
Last Updated 21 ಮಾರ್ಚ್ 2019, 19:37 IST

ನವದೆಹಲಿ: ‘ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಉಷ್ಣವಿದ್ಯುತ್‌ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹ ಮಾಡಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ವಿದ್ಯುತ್‌ ಪ್ರಾಧಿಕಾರ ಇತ್ತೀಚೆಗೆ ವರದಿ ನೀಡಿದ್ದು, ‘ದೇಶದ ಯಾವುದೇ ಉಷ್ಣವಿದ್ಯುತ್‌ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ’ ಎಂದು ಹೇಳಿದೆ.

‘ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಯಾವುದೇ ವಿದ್ಯುತ್‌ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಕಂಡು ಬಂದಿಲ್ಲ. ಕಲ್ಲಿದ್ದಲ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣ’ ಎಂದು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಈಗಿರುವ ಕಲ್ಲಿದ್ದಲು ಸಂಗ್ರಹದಿಂದ ದೇಶದ ವಿದ್ಯುತ್‌ ಸ್ಥಾವರಗಳು 17 ದಿನಗಳವರೆಗೆ ನಿರಂತರವಾಗಿ ಚಾಲನೆಯಲ್ಲಿರಬಹುದಾಗಿದೆ. ನಿಯಮದ ಪ್ರಕಾರ, ಸರಾಸರಿ 15 ದಿನಗಳವರೆಗೆ ಕಲ್ಲಿದ್ದಲು ಸಂಗ್ರಹ ಹೊಂದಿದ್ದರೆ ಸಾಕು.

ಕಲ್ಲಿದ್ದಲು ಸಂಗ್ರಹ ಏಳು ಮತ್ತು ನಾಲ್ಕು ದಿನಗಳ ಬಳಕೆಗಿಂತ ಕಡಿಮೆ ಇದ್ದರೆ ಅದನ್ನು ಸಂಕಷ್ಟದ ಸ್ಥಿತಿ ಎಂದೇ ಪರಿಗಣಿಸಲಾಗುತ್ತದೆ. ಗಣಿಗಳಲ್ಲಿ ವಿದ್ಯುತ್‌ ಸ್ಥಾವರಗಳಿಗೆ ಪೂರೈಸಬಹುದಾದಷ್ಟು ಕಲ್ಲಿದ್ದಲೇ ಇರದಿದ್ದರೆ ಅದನ್ನು ತೀರಾ ಸಂಕಷ್ಟದ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.