ADVERTISEMENT

ವಾಕ್ ಚತುರರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:15 IST
Last Updated 13 ಮಾರ್ಚ್ 2019, 20:15 IST
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ   

ರಾಷ್ಟ್ರೀಯತೆಯು ಬಿಜೆಪಿಯ ಚುನಾವಣಾ ತಂತ್ರ. ಸೀಟು ಹೊಂದಾಣಿಕೆಯೇ ಎಸ್‌ಪಿ, ಬಿಎಸ್‌ಪಿಯ ತಂತ್ರ. ಪ್ರಿಯಾಂಕಾ ಗಾಂಧಿ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ಕಾಂಗ್ರೆಸ್‌ನ ತಂತ್ರ. ಯಾರ ತಂತ್ರಗಾರಿಕೆ ಸರಿ ಎಂಬುದು ಮೇ 23ರಂದು ಗೊತ್ತಾಗಲಿದೆ

ಓಂಪ್ರಕಾಶ್ ರಾಜ್‌ಭರ್, ಸುಹಲ್‌ದೇವ್ ಭಾರತೀಯ ಸಮಾಜಪಕ್ಷದ ಮುಖ್ಯಸ್ಥ

ವ್ಹಾ ಮೋದಿ ಜೀ ವ್ಹಾ.. ಕಾಶ್ಮೀರಕ್ಕಾಗಿ ನೀವು ಏನೆಲ್ಲಾ ಮಾಡಿದ್ದೀರಿ. ನಿಮ್ಮ ಆಡಳಿತದ ಫಲವಾಗಿ ಅಲ್ಲಿ ಮೂರು ಹಂತಗಳ ಚುನಾವಣೆ ಘೋಷಣೆಯಾಗಿದೆ. ಒಂದು ಮತಕ್ಷೇತ್ರಕ್ಕೆ ಮೂರು ದಿನ, ಮೂರು ಹಂತಗಳಲ್ಲಿ ಚುನಾವಣೆ ನಡೆಯುವುದನ್ನು ಎಲ್ಲಿಯಾದರೂ ಕೇಳಿದ್ದೀರಾ?

ADVERTISEMENT

ಅಸಾದುದ್ದೀನ್ ಒವೈಸಿ, ಎಐಎಂಐಎಂ ಅಧ್ಯಕ್ಷ

ಚಂದ್ರಬಾಬು ನಾಯ್ಡು ಅವರು ಗೊಂದಲದ ವ್ಯಕ್ತಿಯಾಗಿ ತೋರುತ್ತಿದ್ದಾರೆ. ಅವರು ತಮ್ಮ ರಾಜಕೀಯ ಜೀವನದ ಅಂತ್ಯದಲ್ಲಿದ್ದು, ಚುನಾವಣೆ ಬಳಿಕ ನಿರ್ಗಮನದ ದಾರಿ ಹಿಡಿಯಲಿದ್ದಾರೆ. ಆಂಧ್ರಪ್ರದೇಶದ ಜನರು ನಾಯ್ಡು ಅವರಿಗೆ ಸುದೀರ್ಘ ರಜೆ ನೀಡಲು ನಿರ್ಧರಿಸಿದ್ದಾರೆ

ಕೆ.ಟಿ. ರಾಮರಾವ್, ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.