ಇ.ಡಿ
(ಸಂಗ್ರಹ ಚಿತ್ರ)
ಕೋಲ್ಕತ್ತ: ಶಾಲಾ ಉದ್ಯೋಗ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪಶ್ಚಿಮ ಬಂಗಾಳದ ಸಚಿವ ಚಂದ್ರನಾಥ್ ಸಿನ್ಹಾ ಅವರ ನಿವಾಸದಲ್ಲಿ ಸುದೀರ್ಘ 14 ಗಂಟೆಗಳ ಕಾಲ ಶೋಧ ನಡೆಸಿ, ಆಸ್ತಿ ಸಂಬಂಧಿಸಿದ ದಾಖಲೆಗಳು, ಒಂದು ಮೊಬೈಲ್ ಫೋನ್ ಹಾಗೂ ಸುಮಾರು ₹40 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಿರ್‌ಭೂಮ್ ಜಿಲ್ಲೆಯ ಬೋಲ್‌ಪುರಲ್ಲಿರುವ ಚಂದ್ರನಾಥ್ ಸಿನ್ಹಾ ನಿವಾಸದ ಮೇಲೆ ಕೇಂದ್ರ ಪಡೆಗಳೊಂದಿಗೆ ಶುಕ್ರವಾರ ದಾಳಿ ನಡೆಸಿದ ಇ.ಡಿ ತಂಡ ಶೋಧ ನಡೆಸಿತು.
‘ಇಷ್ಟು ದೊಡ್ಡ ಮೊತ್ತದ ಹಣವನ್ನು ಸಚಿವ ಚಂದ್ರನಾಥ್ ಸಿನ್ಹಾ, ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದರು ಎಂಬುವುದು ಇನ್ನೂ ಖಚಿತವಾಗಿಲ್ಲ‘ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಶೋಧ ಕಾರ್ಯಾಚರಣೆಯ ವೇಳೆ ₹40 ಲಕ್ಷ ನಗದು ಸೇರಿದಂತೆ ಮೊಬೈಲ್ ಫೋನ್, ಹಲವಾರು ಆಸ್ತಿ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಭಾಗವಾಗಿ ಚಂದ್ರನಾಥ್ ಸಿನ್ಹಾ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ‘ ಎಂದು ಸುದ್ದಿಸಂಸ್ಥೆ ಪಿಟಿಐಗೆ ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.