ADVERTISEMENT

ನಾಯಿಗಳಿಗೆ 24 ಗಂಟೆ ಎಸಿ: ವಿದ್ಯುತ್‌ ಕಳ್ಳತನ ಮಾಡಿದವನಿಗೆ ₹ 7 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 14:47 IST
Last Updated 7 ಮಾರ್ಚ್ 2020, 14:47 IST

ಠಾಣೆ: ಸಾಕು ನಾಯಿಗಳಿಗಾಗಿ ವಿದ್ಯುತ್‌ ಕಳ್ಳತನ ಮಾಡಿ ದಿನದ 24 ಗಂಟೆಯೂ ಏರ್‌ ಕಂಡೀಷನ್‌ (ಎಸಿ) ಹಾಕಿಡುತ್ತಿದ್ದ ನವೀ ಮುಂಬೈ ನಿವಾಸಿಯೊಬ್ಬರಿಗೆ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಸರಬರಾಜು ಕಂಪನಿ ಲಿ. ದಂಡ ವಿಧಿಸಿದ್ದು, ಕದ್ದ ವಿದ್ಯುತ್‌ನ ಮೊತ್ತ ₹7 ಲಕ್ಷವನ್ನೂ ವಸೂಲಿ ಮಾಡಿದೆ.

‘ಮನೆಯಲ್ಲಿ ಹಲವು ವಿದೇಶಿ ತಳಿಯ ನಾಯಿಗಳನ್ನು ಆತ ಸಾಕಿದ್ದ. ಅವುಗಳಿಗಾಗಿ ನಿರಂತರವಾಗಿ ಎಸಿ ಹಾಕುತ್ತಿದ್ದ. ವಿದ್ಯುತ್‌ ಕಳ್ಳತನ ಮಾಡುತ್ತಿರುವುದರ ಬಗ್ಗೆ ನಿಖರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ್ದೆವು.

ಒಟ್ಟು 34,465 ಯುನಿಟ್‌ ವಿದ್ಯುತ್‌ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.