ADVERTISEMENT

ಮಹಾರಾಷ್ಟ್ರ: ಟ್ರ್ಯಾಕ್ಟರ್‌– ಎಸ್‌ಯುವಿ ವಾಹನದ ನಡುವೆ ಅಪಘಾತ, 6 ಮಂದಿ ಸಾವು

ಪಿಟಿಐ
Published 17 ಮೇ 2023, 16:19 IST
Last Updated 17 ಮೇ 2023, 16:19 IST
   

ಮುಂಬೈ: ಟ್ರ್ಯಾಕ್ಟರ್‌– ಎಸ್‌ಯುವಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

ರತ್ನಗಿರಿ–ಪಂಡರಾಪುರ ರಸ್ತೆಯ ಮಿರಾಜ್ ಬಳಿ ಬೆಳಿಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆ.

ಮೃತರಲ್ಲಿ 12 ವರ್ಷದ ಬಾಲಕ ಮತ್ತು ಒಬ್ಬ ಮಹಿಳೆ ಸಹ ಇದ್ದಾರೆ. ಎಸ್‌ಯುವಿ ವಾಹನದ ಇನ್ನಿಬ್ಬರು ಗಾಯಾಳುಗಳು ಮಿರಾಜ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಕೊಲ್ಹಾಪುರದಿಂದ ರತ್ನಗಿರಿ ಕಡೆಗೆ ಸಂಚರಿಸುತ್ತಿದ್ದ ಎಸ್‌ಯುವಿ ವಾಹನ ಮತ್ತು ಇಟ್ಟಿಗೆ ತುಂಬಿದ್ದ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಂತ ವೇಗ, ನಿರ್ಲಕ್ಷ್ಯದ ಆರೋಪದ ಮೇಲೆ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.