ಸಾವು (ಪ್ರಾತಿನಿಧಿಕ ಚಿತ್ರ)
ಭಂಡಾರಾ: ಮಹಾರಾಷ್ಟ್ರದ ಭಂಡರಾ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಮ್ಯಾಂಗನೀಸ್ ಅದಿರು (ಭಾರತ) ಲಿಮಿಟೆಡ್‌ನ ಚಿಖ್ಲಾ ಗಣಿಯಲ್ಲಿ ಚಪ್ಪಡಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮೊದಲ ಪಾಳಿಯ ಕೆಲಸದ ವೇಳೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಗಣಿಯ 100 ಮೀಟರ್ ಆಳದಲ್ಲಿ ಚಪ್ಪಡಿ ಕುಸಿದಿದೆ. ಮೂವರು ಕಾರ್ಮಿಕರು ಚಪ್ಪಡಿಯ ಅಡಿ ಸಿಲುಕಿದ್ದು, ಇದರಲ್ಲಿ ಮಹಾರಾಷ್ಟ್ರದವರಾದ ವಿಜಯ್ ನಂದಲಾಲ್ (50) ಮತ್ತು ಅರುಣ್ ಚೊರ್‌ಮಾರ್ (41) ಸ್ಥಳದಲ್ಲೇ ಮೃತಪಟ್ಟಿದ್ದರು. ಮಧ್ಯಪ್ರದೇಶದವರಾದ ಶಂಕರ್ ವಿಶ್ವಕರ್ಮ (56) ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಂಡಾರಾ ಜಿಲ್ಲೆಯ ವಿಪತ್ತು ನಿರ್ವಹಣಾ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.