ADVERTISEMENT

ಪಾಲ್ಘರ್: ಜೀವದನಿ ಮಾತಾ ದೇವಸ್ಥಾನಕ್ಕೆ ಶೀಘ್ರ ಕೇಬಲ್‌ ಕಾರ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 11:17 IST
Last Updated 22 ನವೆಂಬರ್ 2020, 11:17 IST
ಜೀವದನಿ ಮಾತಾ ದೇವಸ್ಥಾನಕ್ಕೆ ಕೇಬಲ್‌ ಕಾರ್‌
ಜೀವದನಿ ಮಾತಾ ದೇವಸ್ಥಾನಕ್ಕೆ ಕೇಬಲ್‌ ಕಾರ್‌    

ಪಾಲ್ಘರ್: ಪಾಲ್ಘರ್‌ ಜಿಲ್ಲೆಯ ವಿರಾರ್‌ನ ಬೆಟ್ಟದ ತುದಿಯಲ್ಲಿರುವ ಜೀವದನಿ ಮಾತಾ ದೇವಸ್ಥಾನಕ್ಕೆ ಕೇಬಲ್‌ ಕಾರ್‌ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ವರ್ಷದಜನವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ.

ಮಹಾರಾಷ್ಟ್ರದಲ್ಲಿ ಇದು ಎರಡನೇ ಕೇಬಲ್‌ ಕಾರ್‌ ಯೋಜನೆಯಾಗಿದೆ. 2018ರಲ್ಲಿ ನಾಸಿಕ್‌ನಲ್ಲಿರುವ 1440 ಅಡಿ ಎತ್ತರದ ಬೆಟ್ಟದ ತುದಿಯಲ್ಲಿರುವ ಸಪ್ತಶೃಂಗಿ ದೇವಿ ದೇಗುಲಕ್ಕೆ ಕೇಬಲ್‌ ಕಾರ್‌ ಅಳವಡಿಸಲಾಗಿತ್ತು.

ಮುಂಬೈನ ಡೌನ್‌ಟೌನ್‌ನಿಂದ 70 ಕಿ.ಮೀ ದೂರದಲ್ಲಿರುವ ವಿರಾರ್‌ನ ಬೆಟ್ಟದ ತುದಿಯಲ್ಲಿ ಜೀವದನಿ ಮಾತಾ ದೇವಸ್ಥಾನವಿದೆ. ಸಮುದ್ರ ಮಟ್ಟದಿಂದ ಸುಮಾರು 1,500 ಅಡಿ ಎತ್ತರದಬೆಟ್ಟದ ಮೇಲಿದೆ ಈ ದೇವಾಲಯ ಇದೆ. ಬೆಟ್ಟ ತಲುಪಲು 1,465 ಮೆಟ್ಟಿಲುಗಳನ್ನುಹತ್ತಬೇಕು.

ADVERTISEMENT

ಅಂದಾಜು ₹35ಕೋಟಿ ವೆಚ್ಚದ ಈ ಯೋಜನೆಗೆ ಶ್ರೀಜೀವದನಿ ದೇವಿ ಸಂಸ್ಥಾನ ಟ್ರಸ್ಟ್‌ (ಏಸ್‌ಜೆಡಿಎಸ್‌) ತನ್ನ ಸ್ವಂತ ಸಂಪನ್ಮೂಲ ಸೇರಿದಂತೆ ಸಾಲ ಮತ್ತು ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿಕೊಟ್ಟಿದೆ.

ನವರಾತ್ರಿ ಹಬ್ಬದ ಒಂಬತ್ತು ದಿನಗಳಲ್ಲಿ ಅನೇಕ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ದೇವಸ್ಥಾನಕ್ಕೆ ಹತ್ತಲು ಹಿಂದೆ ರೋಪ್‌ವೇ ಇತ್ತು. ಈಗ ಅದನ್ನು ತೆಗೆದು, ಕೇಬಲ್‌ ಕಾರ್‌ ಜೋಡಿಸಲಾಗುತ್ತಿದೆ. 380 ಮೀಟರ್‌ ಕಡಿದಾದ ಗುಡ್ಡದ ಮೇಲೆ 104 ಜನರನ್ನು ಹೊತ್ತು ಕೇಬಲ್‌ ಕಾರು 7 ನಿಮಿಷಗಳಲ್ಲಿ ನೆಲದಿಂದ ಬೆಟ್ಟಕ್ಕೆ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.