ADVERTISEMENT

ಮೊರ್ಬಿ ಸೇತುವೆ ದುರಂತ: ನ್ಯಾಯಾಲಯಕ್ಕೆ ಶರಣಾದ ಪ್ರಮುಖ ಆರೋಪಿ

ಪಿಟಿಐ
Published 31 ಜನವರಿ 2023, 14:36 IST
Last Updated 31 ಜನವರಿ 2023, 14:36 IST
   

ಮೊರ್ಬಿ: ಗುಜರಾತ್‌ನ ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದ ಆರೋಪಿ, ಒರೆವಾ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಜಯಸುಖ್‌ ಪಟೇಲ್‌ ಅವರು ಇಲ್ಲಿಯ ನ್ಯಾಯಾಲಯವೊಂದರ ಎದುರು ಮಂಗಳವಾರ ಶರಣಾದರು ಎಂದು ಸಂತ್ರಸ್ತರ ಪರ ವಕೀಲರು ತಿಳಿಸಿದರು.

135 ಜನರ ಸಾವಿಗೆ ಕಾರಣವಾಗಿದ್ದ ಈ ಸೇತುವೆ ಕುಸಿತ ಪ್ರಕರಣದ ಆರೋಪಪಟ್ಟಿಯನ್ನು ಜ.27ರಂದು ಪೊಲೀಸರು ಸಲ್ಲಿಸಿದ್ದರು. ಅದರಲ್ಲಿ ಪಟೇಲ್‌ರನ್ನು 10ನೇ ಆರೋಪಿ ಎಂದು ತೋರಿಸಲಾಗಿತ್ತು. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ಎಂ.ಜೆ. ಖಾನ್‌ ಅವರು ಪಟೇಲ್‌ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು.

ಬಂಧನಕ್ಕೆ ಹೆದರಿ ಪಟೇಲ್‌ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಒರೆವಾ ಗ್ರೂಪ್‌ ಪಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.