ADVERTISEMENT

ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

ಪಿಟಿಐ
Published 28 ಜನವರಿ 2026, 16:25 IST
Last Updated 28 ಜನವರಿ 2026, 16:25 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಸಿಂಗೂರು(ಪಶ್ಚಿಮ ಬಂಗಾಳ): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧದ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್‌ ಕುಮಾರ್ ಅವರನ್ನು ಫೆಬ್ರುವರಿ 2ರಂದು ಭೇಟಿ ಮಾಡುವುದಕ್ಕೆ ಸಮಯ ನಿಗದಿಯಾದ ಮಾಹಿತಿ ದೊರೆತ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾಗಿ ಟಿಎಂಸಿ ಮೂಲಗಳು ಹೇಳಿವೆ.

‘ಸಿಇಸಿ ಅವರೊಂದಿಗಿನ ಮಾತುಕತೆ ವೇಳೆ, ಎಸ್‌ಐಆರ್‌ ಕುರಿತ ತಮ್ಮ ಆತಂಕಗಳನ್ನು ಮಮತಾ ಬ್ಯಾನರ್ಜಿ ವಿವರಿಸಲಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.