ADVERTISEMENT

ಕೋವಿಡ್ ಚಿಕಿತ್ಸೆ: ಆಮ್ಲಜನಕ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ಮೋದಿಗೆ ಮಮತಾ ಪತ್ರ

ಪಿಟಿಐ
Published 7 ಮೇ 2021, 10:27 IST
Last Updated 7 ಮೇ 2021, 10:27 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಕೋವಿಡ್–19 ಚಿಕಿತ್ಸೆಗಾಗಿ ಆಮ್ಲಜನಕ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.

ಬಂಗಾಳದಲ್ಲಿ ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಕೇಂದ್ರವು ಇತರ ರಾಜ್ಯಗಳಿಗೆ ಹೆಚ್ಚಿನ ಆಮ್ಲಜನಕ ಹಂಚಿಕೆ ಮಾಡುತ್ತಿದೆ. ಬಂಗಾಳಕ್ಕೆ ಹೆಚ್ಚಿನ ಅವಶ್ಯಕತೆಯಿದ್ದರೂ ಇತರ ರಾಜ್ಯಗಳಿಗೆ ಹೆಚ್ಚು ಒದಗಿಸಲಾಗುತ್ತಿದೆ ಎಂದೂ ಮತಾ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿ ದಿನದ ಆಮ್ಲಜನಕ ಬಳಕೆ 24 ಗಂಟೆ ಅವಧಿಯಲ್ಲಿ 470 ಮೆಟ್ರಿಕ್ ಟನ್‌ ತಲುಪಿದೆ. ಇನ್ನು ಒಂದು ವಾರದಲ್ಲಿ ಇದು 550 ಮೆಟ್ರಿಕ್ ಟನ್‌ ಆಗಲಿದೆ ಎಂದು ಮಮತಾ ಹೇಳಿದ್ದಾರೆ.

ADVERTISEMENT

‘ವೈದ್ಯಕೀಯ ಆಮ್ಲಜನಕದ ಹಂಚಿಕೆ ಬಗ್ಗೆ ಪರಿಶೀಲಿಸಲು ಮತ್ತು ದಿನಕ್ಕೆ ಕನಿಷ್ಠ 550 ಮೆಟ್ರಿಕ್ ಟನ್‌ಗಳಷ್ಟು ಆಮ್ಲಜನಕವನ್ನು ರಾಜ್ಯಕ್ಕೆ ತಕ್ಷಣ ಹಂಚಿಕೆ ಮಾಡಲು ಸೂಚನೆಗಳನ್ನು ನೀಡಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಮತಾ ಉಲ್ಲೇಖಿಸಿದ್ದಾರೆ.

ಬೇಡಿಕೆ ಇಟ್ಟಿದ್ದರಿಂದ ಕಡಿಮೆ ಹಂಚಿಕೆ ಮಾಡಿದರೆ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಜತೆಗೆ ರಾಜ್ಯದ ರೋಗಿಗಳ ಪ್ರಾಣಹಾನಿಗೂ ಕಾರಣವಾಗಬಹುದು ಎಂದು ಮಮತಾ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.