ADVERTISEMENT

ಮಗಳ ಮೇಲೆ ಒಂದೂವರೆ ವರ್ಷ ಅತ್ಯಾಚಾರ ಎಸಗಿದ್ದ ತಂದೆ ಬಂಧನ

ಪಿಟಿಐ
Published 9 ಜುಲೈ 2022, 12:36 IST
Last Updated 9 ಜುಲೈ 2022, 12:36 IST
   

ಜೈಪುರ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ರಾಜಸ್ಥಾನದ ಹನುಮಘಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹದಿ ಹರೆಯದ ಸಂತ್ರಸ್ತೆ ಮೇಲೆ ಆಕೆಯ ತಂದೆ ಒಂದೂವರೆ ವರ್ಷ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಜುಲೈ 4ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಆಕೆಯ ತಾಯಿ ಮೃತಪಟ್ಟಾಗ ಬಾಲಕಿಗೆ 13 ವರ್ಷ ವಯಸ್ಸಾಗಿತ್ತು. ಆ ನಂತರ ಆಕೆಯ ತಂದೆ ಒಂದೂವರೆ ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಗ್ಗೆ ಅಜ್ಜಿ ಮತ್ತು ಚಿಕ್ಕಪ್ಪನಿಗೆ ಹೇಳುತ್ತೇನೆಂದು ಬಾಲಕಿ ಪ್ರತಿರೋಧ ಒಡ್ಡಿದಾಗ, ಕೊಲೆ ಮಾಡುತ್ತೇನೆಂದು ತಂದೆ ಬೆದರಿಕೆ ಹಾಕಿದ್ದಾನೆ’ ಎಂದು ಹನುಮಘಡದ ಎಸ್‌ಪಿ ಅಜಯ್ ಸಿಂಗ್ ಹೇಳಿದ್ದಾನೆ.

ADVERTISEMENT

ಇತ್ತೀಚೆಗೆ ಆಕೆಯ ಚಿಕ್ಕಪ್ಪ ಬಾಲಕಿಯನ್ನು ಮನೆಗೆ ಕರೆದೊಯ್ದಾಗ ಅತ್ಯಾಚಾರದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ಬಳಿಕ, ಬಾಲಕಿಯನ್ನು ಪಲ್ಲು ಪೊಲೀಸ್ ಠಾಣೆಗೆ ಕರೆದೊಯ್ದ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ.

ಐಪಿಸಿಯ ವಿವಿಧ ಕಾಯ್ದೆಗಳು ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ಗುರುವಾರ ಬಂಧಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.