ADVERTISEMENT

ಕೇರಳ: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 16:14 IST
Last Updated 29 ಜುಲೈ 2025, 16:14 IST
–
   

ಇಡುಕ್ಕಿ (ಪಿಟಿಐ): ಜಿಲ್ಲೆಯ ಪೆರುವಂತನಂ ಬಳಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಿಂದ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾಂಚಿರಾಪಳ್ಳಿಯ ತಂಪಲಕ್ಕಾಡ್ ನಿವಾಸಿ ಪುರುಷೋತ್ತಮನ್ (64) ಮೃತ ವ್ಯಕ್ತಿ. ಅವರು ರಬ್ಬರ್ ಮರಗಳಿಗೆ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಆನೆ ಕಾಣಿಸಿಕೊಂಡಿತ್ತು. ಓಡಿ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರಾದರೂ ಅನೆ ಅವರ ಮೇಲೆ ದಾಳಿ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT