ಶಬರಿಮಲೆ
ಶಬರಿಮಲೆ: ಅಯ್ಯಪ್ಪ ದೇವಾಲಯದ ಪ್ರಮುಖ ಪೂಜಾವಿಧಿ ವಿಧಾನ ನಡೆಯುವ ಡಿ.25 ಹಾಗೂ 26ರಂದು ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ವರ್ಚುಯಲ್ ಮತ್ತು ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲು ಟಿಡಿಪಿ ನಿರ್ಧರಿಸಿದೆ.
‘ಡಿ. 25ರಂದು 50 ಸಾವಿರ ಹಾಗೂ ಡಿ.26ರಂದು 60 ಸಾವಿರ ಭಕ್ತರಿಗಷ್ಟೇ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ಎರಡೂ ದಿನಗಳಲ್ಲಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಕೇವಲ 5 ಸಾವಿರ ಭಕ್ತರಿಗಷ್ಟೇ ಅವಕಾಶ ನೀಡಲಾಗುವುದು’ ಎಂದು ಟಿಡಿಪಿ ಹೇಳಿದೆ. ಈ ಬಾರಿಯ ಯಾತ್ರಾ ಅವಧಿಯಲ್ಲಿ ವರ್ಚುಯಲ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಪ್ರತಿ ದಿನ 70 ಸಾವಿ ಭಕ್ತರಿಗಷ್ಟೇ ಅವಕಾಶ ಮಾಡಿಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.