ಇಂಫಾಲ್: ಭದ್ರತಾ ಪಡೆಯವರು ಮಣಿಪುರದ ಥೌಬಲ್ ಹಾಗೂ ಇಂಫಾಲ್ ಜಿಲ್ಲೆಗಳಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಕ್ಷ (ಪಿಡಬ್ಲ್ಯುಜಿ)ನ ಒಬ್ಬ ಉಗ್ರನನ್ನು ಥೌಬಾಲ್ ಜಿಲ್ಲೆಯಲ್ಲಿ, ಅದೇ ಸಂಘಟನೆಯ ಮತ್ತೊಬ್ಬ ಉಗ್ರನನ್ನು ಖೋಂಗ್‌ಹಾಮಪತ್ ಮಂತ್ರಿ ಎಂಬಲ್ಲಿ ಮಂಗಳವಾರ ಬಂಧಿಸಲಾಯಿತು. ನಿಷೇಧಿತ ಪ್ರೆಪಾಕ್ ಸಂಘಟನೆಯ ಇನ್ನಿಬ್ಬರನ್ನು ಸೋಮವಾರ ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.