ADVERTISEMENT

ಮತ್ತೆ 200 ಯಾತ್ರಿಗಳ ರಕ್ಷಣೆ

ಪಿಟಿಐ
Published 4 ಜುಲೈ 2018, 20:27 IST
Last Updated 4 ಜುಲೈ 2018, 20:27 IST

ನವದೆಹಲಿ/ಕಠ್ಮಂಡು: ತೀವ್ರ ಮಳೆಯ ಕಾರಣ ನೇಪಾಳದ ಹಿಲ್ಸಾ ಮತ್ತು ಸಿಮಿಕೋಟ್‌ನಲ್ಲಿ ಸಿಲುಕಿಕೊಂಡಿದ್ದ ಭಾರತದ 1,575 ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳಲ್ಲಿ 200 ಜನರನ್ನು ಬುಧವಾರ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ.

‘ಯಾತ್ರೆಗೆ ತೆರಳಿದ್ದ ತಮಿಳುನಾಡಿನ ರಾಮಚಂದ್ರನ್ (69) ಎಂಬುವವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ’ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಮಳೆ ಇರುವ ಕಾರಣ ರಕ್ಷಣಾ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬುಧವಾರದ ಕಾರ್ಯಾಚರಣೆ

5:ಖಾಸಗಿ ವಿಮಾನಗಳ ಬಳಕೆ

3: ಸೇನಾ (ನೇಪಾಳ) ಹೆಲಿಕಾಪ್ಟರ್‌ಗಳ ಬಳಕೆ

35: ಬಾರಿ ಹಾರಾಟ ನಡೆಸಿದ ಹೆಲಿಕಾಪ್ಟರ್‌ಗಳು

200:ಹಿಲ್ಸಾದಿಂದ ಸಿಮಿಕೋಟ್‌ಗೆ ಕರೆತರಲಾದ ಯಾತ್ರಿಗಳ ಸಂಖ್ಯೆ

119:ಯಾತ್ರಿಗಳನ್ನು ಸಿಮಿಕೋಟ್‌ನಿಂದ ಸರ್ಖೇತ್‌ಗೆ ಕರೆತರಲಾಗಿದೆ

* ಭಾರಿ ಮಳೆಯ ಕಾರಣ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ತೊಂದರೆಯಾಗಿದೆ. ಹೀಗಾಗಿ ಯಾತ್ರಿಗಳು ಸಿಲುಕಿರುವ ಸ್ಥಳಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ

* ಯಾತ್ರಿಗಳು ಸಿಲುಕಿರುವ ಎಲ್ಲ ಸ್ಥಳಗಳಿಗೆ ಹೆಲಿಕಾಪ್ಟರ್‌ಗಳ ಸಂಪರ್ಕವೂ ಸಾಧ್ಯವಾಗುತ್ತಿಲ್ಲವಾದ್ದರಿಂದ ಆಹಾರ–ನೀರು–ಔಷಧಗಳ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರದ ಕೊರತೆ ಎದುರಾಗಿದೆ

* ಹಿಲ್ಸಾ ಮತ್ತು ಸಿಮಿಕೋಟ್‌ಗಳಲ್ಲಿ ಸಿಲುಕಿರುವ ಯಾತ್ರಿಗಳಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ

* ಅಗತ್ಯವಿದ್ದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸೇನೆಯ ನೆರವು ನೀಡಲಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ

1,575:ಮಳೆಗೆ ಸಿಲುಕಿದ್ದ ಯಾತ್ರಿಗಳ ಸಂಖ್ಯೆ

604:ಈವರೆಗೆ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿರುವ ಯಾತ್ರಿಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.