ತ್ರಿಶ್ಶೂರ್ (ಕೇರಳ): ಕೇರಳದ ಪದ್ಮನಾಭಪುರಂನ ಮಹಾವಿಷ್ಣು ಕ್ಷೀರಮ್ ದೇವಾಲಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ‘ಪೆಟಾ ಇಂಡಿಯಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್) ಯಾಂತ್ರಿಕ ಆನೆಯೊಂದನ್ನು ಭಾನುವಾರ ಕೊಡುಗೆಯಾಗಿ ನೀಡಿದ್ದಾರೆ.
ಆನೆಗೆ ಪದ್ಮನಾಭಪುರಂ ಪದ್ಮನಾಭನ್ ಎಂದು ಹೆಸರಿಡಲಾಗಿದೆ ಎಂದು ಪೆಟಾ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀ ಕೃಷ್ಣ ಜಯಂತಿಯಂದು, ಯಾಂತ್ರಿಕ ಆನೆಯನ್ನು ಸ್ವಾಮಿ ಹರಿ ನಾರಾಯಣನ್ ಟ್ರಸ್ಟ್ ಅಧ್ಯಕ್ಷರಾದ ಸಾಯಿ ಸಂಜೀವಿನಿ ಅವರು ಅನಾವರಣಗೊಳಿಸಿದರು.
ಪೆಟಾ ಇಂಡಿಯಾ ಇಲ್ಲಿವರೆಗೆ 13 ಯಾಂತ್ರಿಕ ಆನೆಗಳನ್ನು ದೇವಾಲಯಗಳಿಗೆ ಕೊಡುಗೆ ನೀಡಿದ್ದು, ಕೇರಳಕ್ಕೆ ಎಂಟು ಯಾಂತ್ರಿಕ ಆನೆಗಳನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.