ADVERTISEMENT

ಉಜ್ಬೇಕಿಸ್ತಾನದಲ್ಲಿ ಮೇಘಾಲಯ ಪ್ರಧಾನ ಕಾರ್ಯದರ್ಶಿ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 12:54 IST
Last Updated 8 ಏಪ್ರಿಲ್ 2025, 12:54 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಶಿಲ್ಲಾಂಗ್‌: ಮೇಘಾಲಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೈಯದ್‌ ಮೊಹಮ್ಮದ್‌ ಎ. ರಾಝಿ ಅವರ ಮೃತದೇಹವು ಉಜ್ಬೇಕಿಸ್ತಾನದ ಬುಖಾರಾ ನಗರದ ಹೋಟೆಲ್‌ವೊಂದರಲ್ಲಿ ದೊರೆತಿದೆ. 

ADVERTISEMENT

‘ರಾಝಿ ಅವರು ವೈಯಕ್ತಿಕ ಪ್ರವಾಸದ ಮೇಲೆ ಏಪ್ರಿಲ್‌ 4ರಿಂದಲೇ ಬುಖಾರಾ ನಗರದಲ್ಲಿ ತಂಗಿದ್ದರು. ಹೃದಯ ಸ್ತಂಬನದಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

‘ಹಲವು ಬಾರಿ ಕರೆ ಮಾಡಿದರೂ ರಾಝಿ ಅವರು ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ, ಹೋಟೆಲ್‌ನವರು ಕೊಠಡಿಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ರಾಝಿ ಅವರ ಪತ್ನಿ ಬುಖಾರ ನಗರಕ್ಕೆ ತೆರಳಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.